ಹಲ್ಲೆಗೊಳಗಾದ ವಿದ್ಯಾರ್ಥಿ
ದೇಶ
ಬೀಫ್ ಫೆಸ್ಟ್ ಆಯೋಜಿಸಿದ್ದ ಐಐಟಿ ಮದ್ರಾಸ್ ವಿದ್ಯಾರ್ಥಿ ಮೇಲೆ ಗಂಭೀರ ಹಲ್ಲೆ
ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಆದೇಶ ವಿರೋಧಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಕ್ಯಾಂಪಸ್ ನಲ್ಲಿ ....
ಚೆನ್ನೈ: ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಆದೇಶ ವಿರೋಧಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಕ್ಯಾಂಪಸ್ ನಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಪಿಎಚ್ ಡಿ ವಿದ್ಯಾರ್ಥಿ ಮೇಲೆ ಗೋರಕ್ಷಕರು ಗಂಭೀರ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿ ಆರ್ ಸೂರಜ್ ಎಂದು ಗುರುತಿಸಲಾಗಿದ್ದು, ನಿನ್ನೆ ಮದ್ರಾಸ್ ಐಐಟಿ ಕ್ಯಾಂಪಸ್ ನಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದು, ಸುಮಾರು 50 ವಿದ್ಯಾರ್ಥಿಗಳು ಫೆಸ್ಟ್ ನಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಇಂದು ಗೋರಕ್ಷಕರು ಸೂರಜ್ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಐಐಟಿ ವಿದ್ಯಾರ್ಥಿಯ ಬಲಗಣ್ಣು ಸೇರಿದಂತೆ ಹಲವು ಕಡೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ ಮತ್ತೆ ಹಲ್ಲೆ ನಡೆಸುವುದಾಗಿ ಹೇಳುವ ಮೂಲಕ ಬೀಫ್ ತಿನ್ನುವವರಿಗೆ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ