ಗ್ರಾಹಕರಿಗೆ ಸೆಪ್ಟೆಂಬರ್‌ನಿಂದ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಸೇವೆ ಲಭ್ಯ!

ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಕೇಂದ್ರ ಸರ್ಕಾರ ಸಾಮ್ಯದ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಸೇವೆ ತಿರುವನಂತಪುರದಲ್ಲಿ ಆರಂಭಗೊಳ್ಳಬೇಕಿತ್ತು.
ಬಿಎಸ್ಎನ್ಎಲ್
ಬಿಎಸ್ಎನ್ಎಲ್
ತಿರುವನಂತಪುರಂ: ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಕೇಂದ್ರ ಸರ್ಕಾರ ಸಾಮ್ಯದ ಬಿಎಸ್ಎನ್ಎಲ್ 4ಜಿ ನೆಟ್‌ವರ್ಕ್ ಸೇವೆ ತಿರುವನಂತಪುರದಲ್ಲಿ ಆರಂಭಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಇನ್ನು ನಾಲ್ಕು ತಿಂಗಳು ಮುಂದಕ್ಕೆ ಹೋಗಿದೆ. 
2017ರ ಮಾರ್ಚ್ ಅಂತ್ಯದೊಳಗೆ ಬಿಎಸ್ಎನ್ಎಲ್ 4ಜಿ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ 2017ರ ಸೆಪ್ಟೆಂಬರ್ ನಲ್ಲಿ ಸೇವೆ ಲಭ್ಯವಾಗಲಿದೆ ಎಂದು ಬಿಎಸ್ಎನ್ಎಲ್ ಪ್ರಧಾನ ವ್ಯವಸ್ಥಾಪಕ(ಕೇರಳ ಸರ್ಕಲ್) ಆರ್ ಮಣಿ ಹೇಳಿದ್ದಾರೆ. 
ಟೆಂಡರ್ ಪ್ರಕ್ರಿಯೆ ನಿಧಾನವಾಗಿದ್ದರಿಂದ 4ಜಿ ಸೇವೆ ಕಲ್ಪಿಸುವಲ್ಲಿ ಸಾಧ್ಯವಾಗಿಲ್ಲ. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸೆಪ್ಟಂಬರ್ ನಲ್ಲಿ ಸೇವೆ ಆರಂಭಗೊಳ್ಳಲಿದೆ. ಇನ್ನು ಗ್ರಾಹಕರಿಗೆ ಡಿಸೆಂಬರ್ ತಿಂಗಳಿನಿಂದ ಸೇವೆ ಸಂಪೂರ್ಣವಾಗಿ ಸಿಗಲಿದೆ ಎಂದರು. 
ಕೇರಳದಲ್ಲಿ 4ಜಿ ಸೇವೆಗಾಗಿ 2,200 ಹೊಸ 4ಜಿ ಟವರ್ ಗಳನ್ನು ಅಳವಡಿಸಲಾಗುತ್ತದೆ. ಈ ಕಾರ್ಯ ಮುಂದಿನ ವರ್ಷ ಮಾರ್ಚ್ ನಲ್ಲಿ ಮುಕ್ತಾಯವಾಗಲಿದೆ ಎಂದು ಮಣಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com