ಐಐಟಿ ಮದ್ರಾಸ್ ಸಂಶೋಧನಾ ವಿದ್ಯಾರ್ಥಿ ಮೇಲೆ ಹಲ್ಲೆ ವಿರೋಧಿಸಿ ಪ್ರತಿಭಟನೆ

ಬೀಫ್ ಉತ್ಸವದಲ್ಲಿ ಭಾಗವಹಿಸಿದ್ದಕ್ಕೆ ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿಯೊಬ್ಬನ ಮೇಲೆ ಮಂಗಳವಾರ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ಹಲ್ಲೆಗೊಳಗಾದ ಐಐಟಿ ಮದ್ರಾಸ್ ಸಂಶೋಧನಾ ವಿದ್ಯಾರ್ಥಿ ಆರ್ ಸೂರಜ್
ಹಲ್ಲೆಗೊಳಗಾದ ಐಐಟಿ ಮದ್ರಾಸ್ ಸಂಶೋಧನಾ ವಿದ್ಯಾರ್ಥಿ ಆರ್ ಸೂರಜ್
ಚೆನ್ನೈ: ಬೀಫ್ ಉತ್ಸವದಲ್ಲಿ ಭಾಗವಹಿಸಿದ್ದಕ್ಕೆ ಪಿ ಎಚ್ ಡಿ ಸಂಶೋಧನಾ ವಿದ್ಯಾರ್ಥಿಯೊಬ್ಬನ ಮೇಲೆ ಮಂಗಳವಾರ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್ ಆವರಣದ ಎದುರು ಪ್ರತಿಭಟನೆ ನಡೆಸಿದ್ದಾರೆ. 
ಆರ್ ಸೂರಜ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಘೋಷಣೆಗಳನ್ನು ಕೂಗಿದ ಡಿವೈಎಫ್ಐ ಮತ್ತು ಎಸ್ಎಫ್ಐ ವಿದ್ಯಾರ್ಥಿಗಳು ಐಐಟಿ-ಎಂ ಎದುರು ಪ್ರತಿಭಟನೆ ನಡೆಸಿದ್ದಾರೆ. 
ಕೇಂದ್ರ ಸರ್ಕಾರದ ವಿರುದ್ಧವೂ ಅವರು ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರು ನಂತರ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. 
ಹಾಗೆಯೇ ತಂತೈ ಪೆರಿಯಾರ್ ದ್ರಾವಿಡರ ಕಳಗಂ ಸದಸ್ಯರು ಕೂಡ ಐಐಟಿ ಮದ್ರಾಸ್ ಎದುರು ಬೀಫ್ ಔತಣಕೂಟವನ್ನು ಆಯೋಜಿಸಿ ಪ್ರತಿಭಟನೆ ನಡೆಸಿದ್ದಾರೆ. 
ಕೇಂದ್ರ ಸರ್ಕಾರದ ನೂತನ ಜಾನುವಾರು ಹತ್ಯೆಯನ್ನು ವಿರೋಧಿಸಿ ಐಐಟಿ ಮದ್ರಾಸ್ ನಲ್ಲಿ ಬೀಫ್ ಔತಣಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಔತಣಕೂಟಕ್ಕೆ ಹೊರಟಿದ್ದ ಸೂರಜ್ ಅವರನ್ನು ಮತ್ತೊಂದು ವಿದ್ಯಾರ್ಥಿಗಳ ಗುಂಪು ಅಡ್ಡಗಟ್ಟಿ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿತ್ತು. ಬಲಗಣ್ಣಿನ ಮೇಲೆ ಬಲವಾದ ಪೆಟ್ಟಿಗೆ ಗುರಿಯಾದ ಸೂರಜ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com