ಡಿಮಾನೆಟೈಸೇಶನ್ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದ್ದೆ: ಚಿದಂಬರಂ

ಆರ್ಥಿಕ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ತಮ್ಮ ಊಹೆ ನಿಜವಾಗಿದ್ದು, ನೋಟು ಹಿಂಪಡೆತ ನಿರ್ಧಾರ ಅದನ್ನು ಇನ್ನಷ್ಟು ಬಿಗಡಾಯಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ
ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ
ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ
ನವದೆಹಲಿ: ಆರ್ಥಿಕ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ತಮ್ಮ ಊಹೆ ನಿಜವಾಗಿದ್ದು, ನೋಟು ಹಿಂಪಡೆತ ನಿರ್ಧಾರ ಅದನ್ನು ಇನ್ನಷ್ಟು ಬಿಗಡಾಯಿಸಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಹೇಳಿದ್ದಾರೆ. 
"ನೋಟು ಹಿಂಪಡೆತ ನಿರ್ಧಾರ ಅಭಿವೃದ್ಧಿಯನ್ನು ೧ ರಿಂದ ೧.೫% ಕುಂಠಿತಗೊಳಿಸಲಿದೆ ಎಂದಿದ್ದೆ. ಈಗ ಹಾಗೆಯೇ ಆಗಿದೆ. ಜಿವಿಎ ೧.೩% ಕುಂಠಿತವಾಗಿದೆ" ಎಂದು ಮಾಜಿ ಕೇಂದ್ರ ವಿತ್ತ ಸಚಿವ ಚಿದಂಬರಂ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ. 
"ಜುಲೈ ೨೦೧೬ ರಲ್ಲಿಯೇ ಆರ್ಥಿಕ ಅಭಿವೃದ್ಧಿ ನಿಧಾನವಾಗುತ್ತಿತ್ತು ಮತ್ತು ಡಿಮಾನೆಟೈಸೇಶನ್ ಅದನ್ನು ಮತ್ತಷ್ಟು ಬಿಗಡಾಯಿಸಿತು" ಎಂದು ಕೂಡ ಅವರು ಹೇಳಿದ್ದಾರೆ. 
ಈ ವರ್ಷ ಮಾರ್ಚ್ ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ ಜಿಡಿಪಿ ತೀವ್ರ ಕುಂಠಿತವಾಗಿದ್ದು, ಇದಕ್ಕೆ ಡಿಮಾನೆಟೈಸೆಷನ್ ಕಾರಣ ಎಂದು ಊಹಿಸಲಾಗಿದೆ. ಇದು ೬.೧% ಇಳಿದಿದ್ದು ಆರ್ಥಿಕವಲಯದಲ್ಲಿ ಕಳವಳಕಾರಿ ಅಲೆಗಳನ್ನು ಎಬ್ಬಿಸಿದೆ. 
ಕಳೆದ ವಿತ್ತೀಯ ವರ್ಷದಲ್ಲಿ ಜಿಡಿಪಿ ಅಭಿವೃದ್ಧಿ ೭.೧% ಇತ್ತು ಎಂದು ಅಧಿಕೃತವಾಗಿ ಬಿಡುಗಡೆಯಾದ ಮಾಹಿತಿಯಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com