ರಾಜನಾಥ ಸಿಂಗ್
ರಾಜನಾಥ ಸಿಂಗ್

ದೇಶದ ಹಿತಾಸಕ್ತಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ: ರಾಜನಾಥ ಸಿಂಗ್

ಗಡಿಯಲ್ಲಿ ಭಾರತೀಯ ಯೋಧರು ಕಾರ್ಯಗಳು ಶ್ಲಾಘನೀಯವಾಗಿದ್ದು ಕೆಲ ತಿಂಗಳಿನಿಂದ ಗಡಿ ನುಸುಳುವಿಕೆ ಕಡಿಮೆಯಾಗಿದ್ದು ದೇಶದ ಹಿತಾಸಕ್ತಿ ವಿಚಾರಕ್ಕೆ ಬಂದರೆ...
ನವದೆಹಲಿ: ಗಡಿಯಲ್ಲಿ ಭಾರತೀಯ ಯೋಧರು ಕಾರ್ಯಗಳು ಶ್ಲಾಘನೀಯವಾಗಿದ್ದು ಕೆಲ ತಿಂಗಳಿನಿಂದ ಗಡಿ ನುಸುಳುವಿಕೆ ಕಡಿಮೆಯಾಗಿದ್ದು ದೇಶದ ಹಿತಾಸಕ್ತಿ ವಿಚಾರಕ್ಕೆ ಬಂದರೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. 
ಗಡಿ ಭದ್ರತಾ ಪಡೆ(ಬಿಎಸ್ಎಫ್) ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ರಾಜನಾಥ ಸಿಂಗ್, ಪಾಕಿಸ್ತಾನದಿಂದ ಗಡಿ ನುಸುಳುವಿಕೆ ಪ್ರಕರಣಗಳು ಹೆಚ್ಚಾಗಿದ್ದು ಭಾರತ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಸೇನಾ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ 
ಮಾಡಿದ ನಂತರ ಒಳನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿದೆ ಎಂದರು.
ಗಡಿ ಕಾವಲು ಪಡೆ, ಗುಪ್ತಚರ ಜಾಲ ಮತ್ತು ಪೊಲೀಸ್ ರನ್ನು ನಿಯೋಜಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂರು ವ್ಯವಸ್ಥೆಯಿಂದ ಗಡಿಯಲ್ಲಿ ಭದ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದರು. 
ನಮ್ಮ ಶತ್ರುಗಳು ಸಾಮಾಜಿಕ ಜಾಲತಾಣದ ಮೂಲಕ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ವದಂತಿಗಳ ಸತ್ಯಾಸತ್ಯತೆ ಮತ್ತು ದೇಶದ ಹಿತಾಸಕ್ತಿಗೆ ದಕ್ಕೆಯಾಗುತ್ತದೆ. ಅಂತಹ ವದಂತಿಗಳನ್ನು ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಮೂಲಕ ಹರಡದಂತೆ ಮನವಿ ಮಾಡಿದರು. 

Related Stories

No stories found.

Advertisement

X
Kannada Prabha
www.kannadaprabha.com