ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲಿನಲ್ಲಿ ಶೇ.100ರಷ್ಟು ಸೀಟುಗಳು ಭರ್ತಿ:ಯು ಟರ್ನ್ ಹೊಡೆದ ಪಶ್ಚಿಮ ರೈಲ್ವೆ

ಮುಂಬೈ-ಅಹಮದಾಬಾದ್ ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ರೈಲುಗಳ ಟಿಕೆಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈ-ಅಹಮದಾಬಾದ್  ಮಾರ್ಗದ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದ್ದು, ರೈಲುಗಳ ಟಿಕೆಟ್ ಮಾರಾಟದಲ್ಲಿ ಶೇಕಡಾ 40ರಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರ ನೀಡಿದ್ದ ಪಶ್ಚಿಮ ರೈಲ್ವೆ ಇದೀಗ ಯು-ಟರ್ನ್ ಹೊಡೆದಿದೆ. ಪಶ್ಚಿಮ ರೈಲ್ವೆ ವಲಯ ಲಾಭದಾಯಕವಾಗಿದ್ದು ಆಫ್ ಸೀಸನ್ ನಲ್ಲಿ ಕೂಡ ಸೀಟುಗಳು ಭರ್ತಿಯಾಗುತ್ತವೆ ಎಂದು ಹೇಳಿದೆ.
ಕಾರ್ಯಕರ್ತ ಅನಿಲ್ ಗಲ್ಗಲಿ ಕೇಳಿದ್ದ ಪ್ರಶ್ನೆಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ನೀಡಿದ್ದ ಪಶ್ಚಿಮ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಮಂಜಿತ್ ಸಿಂಗ್, ಈ ವರ್ಷ ಜುಲೈಯಿಂದ ಸೆಪ್ಟೆಂಬರ್ ವರೆಗೆ ಅನೇಕ ಸೀಟುಗಳು ಖಾಲಿ ಉಳಿದು ಸುಮಾರು 30 ಕೋಟಿ ರೂಪಾಯಿ ನಷ್ಟವುಂಟಾಗಿತ್ತು ಎಂದು ತೋರಿಸಿತ್ತು.
ಆದರೆ ಇದೀಗ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ರವಿಂದರ್ ಭಕರ್ ಹೇಳಿಕೆ ಪ್ರಕಾರ, ಅಹ್ಮದಾಬಾದ್ ಗೆ ಹೋಗುವ 9 ರೈಲುಗಳು ಮತ್ತು ಅಹ್ಮದಾಬಾದ್ ಮೂಲಕ ಹೋಗುವ 25 ಇತರ ರೈಲುಗಳಿದ್ದು ಈ ವಲಯದಲ್ಲಿ ಒಟ್ಟು ಆದಾಯ ಕಳೆದ ಜುಲೈಯಿಂದ ಸೆಪ್ಟೆಂಬರ್ ವರೆಗೆ 233 ಕೋಟಿ ರೂಪಾಯಿ ಬಂದಿದೆ. ಮುಂಬೈ ಸೆಂಟ್ರಲ್ ನಿಂದ ಅಹ್ಮದಾಬಾದ್ ಮತ್ತು ಅಹ್ಮದಾಬಾದ್ ನಿಂದ ಮುಂಬೈಗೆ ಆಗಮಿಸುವ ರೈಲಿನಿಂದ ಉತ್ತಮ ಆದಾಯವಿದೆ ಎನ್ನಲಾಗಿದೆ. 
ಮುಂಬೈ-ಅಹಮದಾಬಾದ್ ರೈಲುಗಳಲ್ಲಿ ಈಗಾಗಲೇ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದ್ದು, ಈ ಮಧ್ಯೆ ಸರ್ಕಾರ ಬುಲೆಟ್ ರೈಲಿಗೆ ಶಂಕುಸ್ಥಾಪನೆ ನೆರವೇರಿಸಿದೆ ಎಂದು ಅನೇಕರಿಂದ ಟೀಕೆ ವ್ಯಕ್ತವಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com