ಮಹಾಭಾರತದ 'ಅರಗಿನ ಮನೆ' ಉತ್ಖನನಕ್ಕೆ ಪುರಾತತ್ವ ಇಲಾಖೆ ಅನುಮತಿ

ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಅರಗಿನ ಮನೆ(ಲಕ್ಷಗ್ರಹ)ಯ ಉತ್ಖನನಕ್ಕೆ ಭಾರತೀಯ...
ಅರಗಿನ ಮನೆ
ಅರಗಿನ ಮನೆ
ಮೀರತ್(ಉತ್ತರಪ್ರದೇಶ): ಉತ್ತರಪ್ರದೇಶದ ಮೀರತ್ ನಲ್ಲಿ ಮಹಾಭಾರತದಲ್ಲಿ ಪಾಂಡವರು ವಾಸಿಸಿದ್ದರು ಎನ್ನಲಾದ ಅರಗಿನ ಮನೆ(ಲಕ್ಷಗ್ರಹ)ಯ ಉತ್ಖನನಕ್ಕೆ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಅನುಮತಿ ನೀಡಿದೆ. 
ಪಾಂಡವರು ವಾಸಿಸಿದ್ದ ಅರಗಿನ ಮನೆ ಮೀರತ್ ನ ಭಾಗ್ ಪಟ್ ಜಿಲ್ಲೆಯ ಬರ್ನಾವಾ ಪ್ರದೇಶದಲ್ಲಿ ಇದೆ ಎಂಬುದು ಸ್ಥಳೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಲಕ್ಷಗ್ರಹ ಹೊಂದಿರುವ ಭೂ ಪ್ರದೇಶದ ಉತ್ಖನನಕ್ಕೆ ಅವಕಾಶ ಕೊಡಬೇಕೆಂದು ಸ್ಥಳೀಯ ಸಂಶೋಧಕರು ಆರ್ಕ್ಯೋಲಾಜಿಕಲ್ ಸರ್ವೇ ಆಫ್ ಇಂಡಿಯಾಗೆ ಮನವಿ ಸಲ್ಲಿಸಿದ್ದರು.
ಮಹಾಭಾರತ ಮಹಾಕಾವ್ಯದಲ್ಲಿನ ಅರಗಿನ ಮನೆ ತುಂಬಾ ಮಹತ್ವದ ಅಂಶವಾಗಿದೆ. ಕೌರವರು ನಿರ್ಮಿಸಿದ್ದ ಅರಗಿನ ಮನೆ ಇದಾಗಿದ್ದು ಇಲ್ಲಿ ಪಾಂಡವರನ್ನು ಜೀವಂತವಾಗಿ ಸುಡುವ ಸಂಚನ್ನು ಕೌರವರು ರೂಪಿಸಿದ್ದರು. ಆದರೆ ಪಾಂಡವರು ಸುರಂಗ ಮಾರ್ಗದ ಮೂಲಕ ತಪ್ಪಿಸಿಕೊಂಡಿದ್ದರು ಎಂದು ಕಾವ್ಯದಲ್ಲಿ ಬರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com