ನೂತನ ಹಜ್ ನೀತಿಯಲ್ಲಿ ಮೀಸಲಾತಿ ಕೋಟಾ ಮುಂದುವರಿಕೆ: ಕೇಂದ್ರ ಸರ್ಕಾರ

ಕಳೆದ ಜನವರಿಯಲ್ಲಿ ನೇಮಿಸಲಾಗಿದ್ದ ವಿಶೇಷ ಸಮಿತಿಯ ಶಿಫಾರಸಿನಂತೆ ಹಜ್ ಸಬ್ಸಿಡಿಯನ್ನು ಮುಂದಿನ ವರ್ಷದಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಳೆದ ಜನವರಿಯಲ್ಲಿ ನೇಮಿಸಲಾಗಿದ್ದ ವಿಶೇಷ ಸಮಿತಿಯ ಶಿಫಾರಸಿನಂತೆ ಹಜ್ ಸಬ್ಸಿಡಿಯನ್ನು ಮುಂದಿನ ವರ್ಷದಿಂದ ತೆಗೆದುಹಾಕಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಹಿರಿಯ ನಾಗರಿಕರಿಗೆ ಇರುವ ಮೀಸಲಾತಿ ಕೋಟಾವನ್ನು ಮುಂದುವರಿಸಲು ತೀರ್ಮಾನಿಸಿದೆ. 
ಹಜ್ ಯಾತ್ರಿಕರಲ್ಲಿ ಹಿರಿಯ ನಾಗರಿಕರಿಗೆ ಹಸಿರು ವಿಭಾಗದಲ್ಲಿ ನೀಡಲಾಗುವ ಮೀಸಲಾತಿ ಕೋಟಾವನ್ನು ಮುಂದುವರಿಸಲು ಮತ್ತು ನಿರ್ಗಮನದ ಅಂಕಗಳನ್ನು ಸದ್ಯಕ್ಕೆ ತೆಗೆದುಹಾಕದಿರಲು ನಿರ್ಧರಿಸಿದೆ.ಯಾತ್ರಿಕರಿಗೆ ನಿರ್ಗಮನದ ಅಂಕಗಳ ಆಯ್ಕೆಯನ್ನು ಯಾತ್ರಿಕರಿಗೆ ನೀಡಲು ಸರ್ಕಾರ ನಿನ್ನೆ ನಡೆದ ಸಭೆಯಲ್ಲಿ ನಿರ್ಧರಿಸಿದೆ ಎಂದು ಭಾರತೀಯ ಹಜ್ ಸಮಿತಿಯ ಅಧ್ಯಕ್ಷ ಮೆಹಬೂಬ್ ಆಲಿ ಕೈಸರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಿನ್ನೆ ಸರ್ಕಾರದ ಅಲ್ಪಸಂಖ್ಯಾತ ಇಲಾಖೆ ಮತ್ತು ಹಜ್ ಸಮಿತಿಯ ಸಭೆಗೂ ಮುನ್ನ ಭಾರತೀಯ ಹಜ್ ಸಮಿತಿ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಜ್ ಸಮಿತಿ ಮುಂಬೈನಲ್ಲಿ ಪ್ರತ್ಯೇಕ ಸಭೆ ನಡೆಸಿ ಕರಡು ನೀತಿ ಕುರಿತು ಚರ್ಚೆ ನಡೆಸಿತು. ವಿಸ್ತ್ರೃತ ಜ್ಞಾಪನೆಯನ್ನು ನಂತರ ಅಲ್ಪಸಂಖ್ಯಾತ ಸಚಿವಾಲಯಕ್ಕೆ ಸಲ್ಲಿಸಲಾಯಿತು. ಅದರಲ್ಲಿ ಹಜ್ ಸಬ್ಸಿಡಿಯನ್ನು ಮುಂದಿನ ವರ್ಷ ತಕ್ಷಣದಿಂದ ತೆಗೆದುಹಾಕುವುದನ್ನು, ನಿರ್ಗಮನದ ಅಂಕಗಳನ್ನು ಕಡಿಮೆ ಮಾಡುವುದು ಮತ್ತು 70 ವರ್ಷಗಳಿಗೂ ಮೀರಿದ ವೃದ್ಧರಿಗೆ ಮೀಸಲಾತಿ ಕೋಟಾವನ್ನು ತೆಗೆದುಹಾಕುವುದಕ್ಕೆ ಆಕ್ಷೇಪಣೆ ಎತ್ತಲಾಗಿತ್ತು.
ಪ್ರಸ್ತುತ ಮೂರು ಹಜ್ ಯೋಜನೆಗಳಿದ್ದು ಅಜಿಜ್ಯಾ, ಗ್ರೀನ್ ಮತ್ತು ಖಾಸಗಿ ಪ್ರವಾಸ ನಿರ್ವಾಹಕರಿಂದ ಸೌಲಭ್ಯ ಒದಗಿಸಲಾಗುತ್ತದೆ. ಮೊದಲೆರಡು ಯೋಜನೆಗಳು ಸಬ್ಸಿಡಿದಾಯಕವಾಗಿದ್ದು ಅದನ್ನು ಭಾರತೀಯ ಹಜ್ ಸಮಿತಿ ಒದಗಿಸುತ್ತದೆ.
ಈ ವರ್ಷ 1,70,000 ಯಾತ್ರಿಕರು ಹಜ್ ಯಾತ್ರೆ ಕೈಗೊಂಡಿದ್ದರು. ಏರ್ ಇಂಡಿಯಾ ವಿಮಾನದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ ಯಾತ್ರಿಕರು ವಿಮಾನದ ದರದಲ್ಲಿ ರಿಯಾಯಿತಿ ನೀಡುವ ಮೂಲಕ ಸಬ್ಸಿಡಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com