ರೈಲ್ವೆ ಪೋರ್ಟಲ್ ಜೊತೆ ಆಧಾರ್ ಸಂಖ್ಯೆ ಜೋಡಿಸಿದರೆ ಟಿಕೆಟ್ ಬುಕ್ಕಿಂಗ್ ಸಂಖ್ಯೆ ಏರಿಕೆ

ಆಧಾರ್ ಸಂಖ್ಯೆ ಪರಿಶೀಲಿಸಿಕೊಂಡ ಪ್ರಯಾಣಿಕರು ಭಾರತೀಯ ರೈಲ್ವೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಧಾರ್ ಸಂಖ್ಯೆ  ಪ್ರಯಾಣಿಕರು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ) ಪೋರ್ಟಲ್ ನಲ್ಲಿ ತಿಂಗಳಿಗೆ ಬುಕ್ಕಿಂಗ್ ಮಾಡುವ ಟಿಕೆಟ್ ಗಳ ಸಂಖ್ಯೆಯನ್ನು 6ರಿಂದ 12ಕ್ಕೆ ಹೆಚ್ಚಿಸಿದೆ.
ಈ ಸೌಲಭ್ಯ ಕಳೆದ ತಿಂಗಳು 26ರಂದು ಜಾರಿಗೆ ಬಂದಿದ್ದು, ಪ್ರಯಾಣಿಕರು ತಮ್ಮ ಆಧಾರ್ ಸಂಖ್ಯೆಯನ್ನು ಐಆರ್ ಸಿಟಿಸಿಯ ಆನ್ ಲೈನ್ ಬುಕ್ಕಿಂಗ್ ಖಾತೆಗೆ ಸಂಪರ್ಕಿಸಲು ಉತ್ತೇಜಿಸುವ ಸಲುವಾಗಿ ರೈಲ್ವೆ ಇಲಾಖೆ ತೆಗೆದುಕೊಂಡಿರುವ ನವೀನ ಮಾರ್ಗವಾಗಿದೆ.
ಆದರೂ ಆಧಾರ್ ಸಂಖ್ಯೆ ಪರಿಶೀಲಿಸಿಕೊಳ್ಳದಿರುವ ಪ್ರಯಾಣಿಕರು ಆನ್ ಲೈನ್ ನಲ್ಲಿ ತಿಂಗಳಿಗೆ ಆರು ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದು. 6ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಮಾಡಿದರೆ ಪ್ರಯಾಣಿಕರ ಆಧಾರ್ ಸಂಖ್ಯೆಯನ್ನು ಐಆರ್ ಸಿಟಿಸಿ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಬೇಕು. ಐಆರ್ ಸಿಟಿಸಿಯ ದಾಖಲಾತಿ ಬಳಕೆದಾರರು ಮೈ ಪ್ರೊಫೈಲ್ ಗೆ ಹೋಗಿ ಆಧಾರ್ ಕೆವೈಸಿ ಆಯ್ಕೆಯನ್ನು ಬಳಸಿ ಆಧಾರ್ ಸಂಖ್ಯೆಯನ್ನು ಪರಿಶೀಲನೆ ಮಾಡಬೇಕು. 
ಟಿಕೆಟ್ ಬುಕ್ಕಿಂಗ್ ನಲ್ಲಿ ರಿಯಾಯಿತಿಯನ್ನು ಪಡೆಯಲು ಐಆರ್ ಸಿಟಿಸಿಯಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಾತಿ ಮಾಡಬೇಕೆಂದು ರೈಲ್ವೆ ಇಲಾಖೆ ಕಳೆದ ಡಿಸೆಂಬರ್ ನಲ್ಲಿ ಘೋಷಿಸಿ ಈ ವರ್ಷ ಏಪ್ರಿಲ್ ನಿಂದ ಕಡ್ಡಾಯ ಎಂದು ಹೇಳಿತ್ತು. ಆದರೆ ಹಲವು ವೇದಿಕೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com