ಹೇಮಮಾಲಿನಿ
ದೇಶ
ಗೂಳಿ ತಿವಿತದಿಂದ ಹೇಮಮಾಲಿನಿ ಬಚಾವ್: ಸ್ಟೇಷನ್ ಮ್ಯಾನೆಜರ್ ಅಮಾನತು
ಮಥುರಾ ರೈಲ್ವೆ ನಿಲ್ದಾಣದ ಬಳಿಕ ಗೂಳಿ ದಾಳಿಯಿಂದ ಬಿಜೆಪಿ ಸಂಸದೆ ಹೇಮಮಾಲಿನಿ ಅವರು ಸ್ವಲ್ಪದರಲ್ಲೇ ಬಚಾವಾಗಿದ್ದು ದಿನಗಳ ಬಳಿಕ ನಿಲ್ದಾಣದ...
ಮಥುರಾ: ಮಥುರಾ ರೈಲ್ವೆ ನಿಲ್ದಾಣದ ಬಳಿಕ ಗೂಳಿ ದಾಳಿಯಿಂದ ಬಿಜೆಪಿ ಸಂಸದೆ ಹೇಮಮಾಲಿನಿ ಅವರು ಸ್ವಲ್ಪದರಲ್ಲೇ ಬಚಾವಾಗಿದ್ದು ದಿನಗಳ ಬಳಿಕ ನಿಲ್ದಾಣದ ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿದೆ.
ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕರು ಸೇರಿದಂತೆ ಹಲರನ್ನು ಅಮಾನತು ಮಾಡಲಾಗಿದ್ದು ತನಿಖೆಗೆ ಆಗ್ರಹಿಸಲಾಗಿದೆ ಎಂದು ಉತ್ತರ ಕೇಂದ್ರ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂಚಿತ್ ತ್ಯಾಗಿ ಅವರು ಹೇಳಿದ್ದಾರೆ.
ಮಥುರಾದ ಬಿಜೆಪಿ ಸಂಸದೆ ಹೇಮಮಾಲಿನಿ ಅವರು ನಿಲ್ದಾಣದ ಪುನರುಜ್ಜೀವನ ಕುರಿತಂತೆ ಪರಿಶೀಲನೆಗೆ ತೆರಳಿದ್ದಾಗ ನಿಲ್ದಾಣದ ಫ್ಲಾಟ್ ಫಾರಂ ಮೇಲೆ ಗೂಳಿಯೊಂದು ಹೇಮಮಾಲಿನಿ ಅವರನ್ನು ತಿಳಿಯಲು ಮುಂದಾಯಿತು. ಈ ವೇಳೆ ಹಿಂದಕ್ಕೆ ಸರಿದಿದ್ದರಿಂದ ಗೂಳಿ ತಿವಿತದಿಂದ ಹೇಮಮಾಲಿನಿ ಅವರು ಪಾರಾಗಿದ್ದರು ಎಂದು ತ್ಯಾಗಿ ಅವರು ಹೇಳಿದ್ದಾರೆ.


