2ಜಿ ಸ್ಪೆಕ್ಟ್ರಂ ಹಗರಣದ ತೀರ್ಪು ಮುಂದೂಡಿಕೆ: ಡಿಸೆಂಬರ್ 5ಕ್ಕೆ ಘೋಷಣೆ

2ಜಿ ಹಗರಣದ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪಿನ ದಿನಾಂಕ ಘೋಷಣೆಯನ್ನು ಡಿಸೆಂಬರ್ 5ಕ್ಕೆ ,...
ಮಾಜಿ ಸಚಿವ ಎ. ರಾಜಾ ಮತ್ತು ಡಿ ಬಿ ಗ್ರೂಪ್ ನ ಶಾಹಿದ್ ಉಸ್ಮಾನ್ ಬಲ್ವಾ
ಮಾಜಿ ಸಚಿವ ಎ. ರಾಜಾ ಮತ್ತು ಡಿ ಬಿ ಗ್ರೂಪ್ ನ ಶಾಹಿದ್ ಉಸ್ಮಾನ್ ಬಲ್ವಾ
Updated on
ನವದೆಹಲಿ: 2ಜಿ ಹಗರಣದ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪಿನ ದಿನಾಂಕ ಘೋಷಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ. 
ಯುಪಿಎ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಪ್ರಕರಣದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಮತ್ತು ಮಾಜಿ ಟೆಲಿಕಾಂ ಸಚಿವ ಎ ರಾಜಾ ಈ ಹಗರಣದ ಪ್ರಮುಖ ಆರೋಪಿಗಳಾಗಿದ್ದಾರೆ. 
ನಡೆದ ಬಹುಕೋಟಿ ಹಗರಣ, 2ಜಿ ಸ್ಪೆಕ್ಟ್ರಂಗೆ ಸಂಬಂಧಿಸಿದಂತೆ ತೀರ್ಪಿನ ದಿನಾಂಕವನ್ನು ಡಿಸೆಂಬರ್ 5 ಕ್ಕೆ ಘೋಷಿಸಲಾಗುವುದು ಎಂದು ನವದೆಹಲಿಯ ವಿಶೇಷ ನ್ಯಾಯಾಲಯ ಹೇಳಿದೆ. ಈ ಮೊದಲು ನವೆಂಬರ್ 7 ರಂದು ದಿನಾಂಕ ಘೋಷಿಸುವುದಾಗಿ ನ್ಯಾಯಾಲಯ ಹೇಳಿತ್ತು.
2ಜಿ ತರಂಗಗುಚ್ಛ ಹಗರಣ ಬೆಳಕಿಗೆ ಬಂದಿದ್ದು 2008 ರಲ್ಲಿ. ಆಗಿನ ಯುಪಿಎ ಮೈತ್ರಿ ಸರ್ಕಾರ, ಹಲವು ಟೆಲಿಕಾಂ ಕಂಪೆನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಆರೋಪದಿಂದಾಗಿ 2 ಜಿ ಸ್ಪೆಕ್ಟ್ರಂ ಸುದ್ದಿಯಾಗಿತ್ತು. ನಂತರ ಯುಪಿಎ ಸರ್ಕಾರದ ಬಹುಮುಖ್ಯ ಹಗರಣಗಳಲ್ಲೊಂದಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com