ಪಶ್ಚಿಮ ಬಂಗಾಳ: 9.70 ಲಕ್ಷ ರೂ ಮುಖಬೆಲೆಯ 485 ನಕಲಿ ನೋಟುಗಳ ವಶ, ಓರ್ವನ ಬಂಧನ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಯಲ್ಲಿ 9.70 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಂದು ವಶಕ್ಕೆ ಪಡೆದಿದೆ.
ಪಶ್ಚಿಮ ಬಂಗಾಳ: 9.70 ಲಕ್ಷ ರೂ ಮುಖಬೆಲೆಯ 485 ನಕಲಿ ನೋಟುಗಳ ವಶ, ಓರ್ವನ ಬಂಧನ
ಪಶ್ಚಿಮ ಬಂಗಾಳ: 9.70 ಲಕ್ಷ ರೂ ಮುಖಬೆಲೆಯ 485 ನಕಲಿ ನೋಟುಗಳ ವಶ, ಓರ್ವನ ಬಂಧನ
ಕೊಲ್ಕತ್ತ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಭಾರತ-ಬಾಂಗ್ಲಾ ಗಡಿಯಲ್ಲಿ 9.70 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಂದು ವಶಕ್ಕೆ ಪಡೆದಿದೆ.
ಮಾಲ್ಡಾದ ಕಲಿಯಾಚಕ್ ನ ನಿವಾಸಿ ಇಕ್ರಾಮುಲ್ ಸೈಕ್ (50) ಎನ್ನುವವನನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು ಅವನಿಂದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ೆಫ್ ನ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದರು. ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತೀಯ ನಕಲಿ ನೋಟುಗಳ ಹಾವಳಿ ಅತಿಯಾಗಿದ್ದು ಆ ಕುರಿತಂತೆ ಪರೀಕ್ಷಿಸಲು ತೆರಳಿದ್ದ ಬಿಎಸ್ ಎಫ್ ವಿಶೇಷ ಕಾರ್ಯಾಚರಣೆಯಡಿಯಲ್ಲಿ ಸೈಕ್ ನನ್ನು ಬಂಧಿಸಲಾಗಿದೆ.
"2,000 ರೂ. ಮುಖಬೆಲೆಯ 485 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಇದರ ಒಟ್ಟು ಮುಖಬೆಲೆ 9.70 ಲಕ್ಷ ರೂ. ಆಗಿದೆ. ಈಗ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಪೋಲೀಸರಿಗೆ ಒಪ್ಪಿಸಲಾಗಿದೆ." ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com