ದೆಹಲಿ ಎಟಿಎಂ ನಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಪತ್ತೆ!

ದೆಹಲಿಯ ಶಹೀನ್ ಬಾಗ್ ಎಟಿಎಂ ಒಂದರಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಸಿಕ್ಕಿದೆ!
ದೆಹಲಿ ಎಟಿಎಂ ನಲ್ಲಿ 2  ಸಾವಿರ ರೂ. ಮುಖಬೆಲೆಯ ಅರ್ಧ ನೋಟು ಪತ್ತೆ!
ದೆಹಲಿ ಎಟಿಎಂ ನಲ್ಲಿ 2 ಸಾವಿರ ರೂ. ಮುಖಬೆಲೆಯ ಅರ್ಧ ನೋಟು ಪತ್ತೆ!
Updated on
ನವದೆಹಲಿ: ದೆಹಲಿಯ ಶಹೀನ್ ಬಾಗ್ ಎಟಿಎಂ ಒಂದರಲ್ಲಿ 2 ಸಾವಿರ ರೂ. ಮುಖಬೆಲೆಯ ಅರೆಮುದ್ರಿತ ನೋಟು ಸಿಕ್ಕಿದೆ! ಅರ್ಧ 2  ಸಾವಿರ ರೂ. ನೋಟಿಗೆ ಇನ್ನರ್ಧ ಬಿಳಿ ಹಾಳೆಯನ್ನು ಕತ್ತರಿಸಿ ಅಂಟಿಸಿದ ಸ್ಥಿತಿಯಲ್ಲಿರುವ ನೋಟು ಮಹಮದ್ ಶಾದಾಬ್ ಎನ್ನುವವರಿಗೆ ದೊರಕಿದೆ.
ಡಿಸಿಬಿ ಬ್ಯಾಂಕ್ ಎಟಿಎಂ ನಲ್ಲಿ ಈ ನಕಲಿ ನೋಟು ಸಿಕ್ಕಿದ್ದು ಬೆಳಗ್ಗೆ 11.55ಕ್ಕೆ ಬ್ಯಾಂಕ್ ಎಟಿಎಂ ನಿಂದ ಹಣ ವಿತ್ ಡ್ರಾ ಮಾಡಿದ್ದ ವೇಳೆ ಶಾದಾಬ್ ಈ ನೋಟನ್ನು ಕಂಡು ಬೆಚ್ಚಿ ಬಿದ್ದರು. ತಕ್ಷಣ ಈ ವಿಷಯವನ್ನು ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ತಂದ ಶಾದಾಬ್ ಗೆ ಸರಿಯಾದ ಪ್ರತಿಕ್ರಿಯೆ ದೊರಕಲಿಲ್ಲ. ಆವರು ಈ ಕುರಿತಂತೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಸಂಗಮ್ ವಿಹಾರ್ ಮತ್ತು ಅಮರ್ ಕಾಲೋನಿ ಎಟಿಎಂ ಗಳಲ್ಲಿ ಚಿಲ್ಡ್ರೆನ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನ 2 ಸಾವಿರದ ನಕಲಿ ನೋಟು ಪತ್ತೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com