ಜಾರ್ಖಂಡ್ : ಮುಸ್ಲಿಂ ಯೋಗ ಶಿಕ್ಷಕಿಗೆ ಬೆದರಿಕೆ; ಪೊಲೀಸರ ಭದ್ರತೆ

ಮುಸ್ಲಿಂ ಯೋಗ ಶಿಕ್ಷಕಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ಆಕೆಗೆ ಭದ್ರತೆ ಒದಗಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಮುಸ್ಲಿಂ ಯೋಗ ಶಿಕ್ಷಕಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ  ಜಾರ್ಖಂಡ್ ಪೊಲೀಸರು ಆಕೆಗೆ ರಕ್ಷಣೆ ಒದಗಿಸಿದ್ದಾರೆ.
ಕೆಲ ಹಿಂದುಗಳು ಹಾಗೂ ಮುಸ್ಲಿಮರು ಯೋಗ ತರಬೇತಿ ಬಿಡುವಂತೆ ಹಾಗೂ ಹೆಸರನ್ನು ಬದಲಿಸುವಂತೆ ಮತ್ತು ದುಪ್ಪಟ್ಟ ಹೊದ್ದಿಕೊಳ್ಳುವಂತೆ ಆಕೆಗೆ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ದೂರು ನೀಡಿದ್ದರು.
ರಾಫಿಯಾ ನಾಜ್ ಎಂಬ ಮಹಿಳೆ ಯೋಗ ತರಬೇತಿ ನೀಡುತ್ತಿದ್ದು, ಕಳೆದ ಕೆಲವು ದಿನಗಳಿಂದ ಆಕೆಗೆ ಬೆದರಿಕೆ ಕರೆ  ಬರುತ್ತಿದ್ದವು. ಇದರಿಂದ ಭಯಗೊಂಡ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ.
ಹಿಂದೂ ಮತ್ತು ಮಸ್ಲಿಂ ಎರಡು ಸಮುದಾಯದವರಿಂದ ಪದೇ ಪದೇ ಬೆದರಿಕೆ ಕರೆ ಬರುತ್ತಿವೆ. ನನ್ನ ಹೆಸರನ್ನು ಬದಲಾಯಿಸುವಂತೆ ಹಾಗೂ ಯೋಗ ಹೇಳಿಕೊಡುವಾಗ ದುಪ್ಪಟ್ಟ ಹಾಕಿ ಕೊಳ್ಳುವಂತೆ ಕರೆ ಮಾಡಿ ಬೆದರಿಸಲಾಗುತ್ತಿದೆ ಎಂದು ರಾಫಿಯಾ ಆರೋಪಿಸಿದ್ದಾರೆ.
ತಾನು ಯೋಗ ತರಬೇತಿ ನಡೆಸುತ್ತಿದ್ದು. ಕೆಲ ಮಂದಿ ಒಂದು ವೇಳೆ  ತರಬೇತಿ ನೀಡುವುದನ್ನು ಮುಂದುವರಿಸಿದರೇ  ನನ್ನ ವಿರುದ್ಧ ಫತ್ವಾ ವಿರುದ್ಧವಾಗಿ ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಯಲ್ಲಿ ರಾಫಿಯಾ ಅವರ ಭದ್ರತೆಗಾಗಿ ಇಬ್ಬರು ಕಾನ್ ಸ್ಟೇಬಲ್ ಗಳನ್ನು ನೀಡಲಾಗಿದೆ. ಇತ್ತೀಚೆಗೆ ರಾಫಿಯಾ ನಾಜ್ ಯೋಗಗುರು ಬಾಬಾ ರಾಮ್ ದೇವ ಅವರ ಎದುರು ರಾಂಚಿಯಲ್ಲಿ ತಮ್ಮ ಯೋಗ ಪ್ರದರ್ಶನ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com