ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ದಾರಿ ಮಾಡಿಕೊಡುತ್ತಿರುವ ಲಷ್ಕರ್!

ಉಗ್ರ ಸಂಘಟನೆ ಲಷ್ಕರ್-ಎ-ತಯ್ಬಾ ಪಾಕಿಸ್ತಾನದ ರಾಜಕಾರಣದ ಮುನ್ನೆಲೆಗೆ ಎಂಟ್ರಿ ಕೊಡಲು ಯತ್ನಿಸುತ್ತಿರುವುದು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ
ಮಸೂದ್ ಅಜರ್
ಮಸೂದ್ ಅಜರ್
ನವದೆಹಲಿ: ಉಗ್ರ ಸಂಘಟನೆ ಲಷ್ಕರ್-ಎ-ತಯ್ಬಾ ಪಾಕಿಸ್ತಾನದ ರಾಜಕಾರಣದ ಮುನ್ನೆಲೆಗೆ ಎಂಟ್ರಿ ಕೊಡಲು ಯತ್ನಿಸುತ್ತಿರುವುದು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಒಳನುಸುಳಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, ಕಾಶ್ಮೀರದಲ್ಲಿ ಜಿಹಾದ್ ನ್ನು ತೀವ್ರಗೊಳಿಸುವುದಕ್ಕೆ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್  ಹೆಚ್ಚು ಸಂಪನ್ಮೂಲಗಳನ್ನು ಬಳಕೆ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೇ ಬಿಎಸ್ಎಫ್ ಕ್ಯಾಂಪ್ ಹಾಗೂ ಇನ್ನಿತರ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವುದನ್ನೂ ಸಹ ಬಹಿರಂಗವಾಗಿ ಹೇಳಿದ್ದಾನೆ. 
ಪಾಕಿಸ್ತಾನದ ಮಸೀದಿಯೊಂದರಲ್ಲಿ ಮಾಡಿರುವ ಭಾಷಣದ ಪ್ರಕಾರ ಮಸೂದ್ ಬಿಎಸ್ಎಫ್ ಕ್ಯಾಂಪ್ ನಲ್ಲಿ ನಡೆದಿರುವ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವುದನ್ನು ಒಪ್ಪಿಕೊಂಡಿದ್ದು, ಜಿಹಾದ್ ನ್ನು ತೀವ್ರಗೊಳಿಸುವಂತೆ ಕರೆ ನೀಡಿದ್ದಾನೆ. 2000 ದಿಂದ ಪ್ರಾರಂಭವಾಗಿರುವ ಆತ್ಮಹತ್ಯಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಭಯೋತ್ಪಾದಕ ಮಸೂದ್ ಅಜರ್ ಹೇಳಿದ್ದಾನೆ. ಇತ್ತೀಚೆಗಷ್ಟೇ ಆತನ ಸಂಬಂಧಿಯಾಗಿದ್ದ ತಲ್ಹಾ ರಶೀದ್ ತನ್ನ ಇಬ್ಬರು ಸಹಚರರೊಂದಿಗೆ ಗಡಿಯಿಂದ ಒಳನುಸುಳುತ್ತಿದ್ದ ವೇಳೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮಸೂದ್ ಅಜರ್ ಈ ಹೇಳಿಕೆ ನೀಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com