ಫೈಲ್ ಚಿತ್ರ
ದೇಶ
90ನೇ ವಸಂತಕ್ಕೆ ಕಾಲಿಟ್ಟ ಎಲ್ ಕೆ ಅಡ್ವಾಣಿಗೆ ಪ್ರಧಾನಿ ಮೋದಿ ಶುಭಾಶಯ
ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ಮುಕಂಡ ಲಾಲ್ ಕೃಷ್ಣ ಅಡ್ವಾಣಿಯವರಿಗಿಂದು 90 ನೇ ಜನುಮ ದಿನ.
ನವದೆಹಲಿ: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿಯ ಹಿರಿಯ ಮುಕಂಡ ಲಾಲ್ ಕೃಷ್ಣ ಅಡ್ವಾಣಿಯವರಿಗಿಂದು 90 ನೇ ಜನುಮ ದಿನ. ಈ ಸಂದರ್ಭದಲ್ಲಿ ಬಿಜೆಪಿಯ ಉಕ್ಕಿನ ಮನುಷ್ಯ ಅಡ್ವಾಣಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.
"ದೇಶಸೇವೆಗೆಂದು ತಮ್ಮ ಬದುಕನ್ನು ಮೀಸಲಿಟ್ಟ ರಾಜಕೀಯ ಅಗ್ರಜ ಅಡ್ವಾಣಿ ಅವರಿಗೆ ಜನುಮ ದಿನದ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಇವರಲ್ಲದೆ ಬಿಜೆಪಿಯ ಇನ್ನೂ ಅನೇಕ ಹಿರಿಯ ಮುಖಂಡರು ಪಕ್ಷದ ಹಿರಿಯ ನಾಯಕನ ಜನ್ಮ ದಿನಕ್ಕೆ ಶುಭ ಹಾರೈಸಿದ್ದಾರೆ.
ಕರಾಚಿಯ ವ್ಯಾಪಾರಿ ಕಿಶನ್ ಚಂದ್ ಅಡ್ವಾಣಿ ಮತ್ತು ಗ್ಯಾನಿ ದೇವಿ ಅವರ ಪುತ್ರನಾಗಿ 1927 ನವೆಂಬರ್ 8 ರಂದು ಜನಿಸಿದ ಅಡ್ವಾಣಿ ಹಿಂದೂ ಪರ ಧೋರಣೆಗಳಿಂದಲೇ ಗುರುತಿಸಿಕೊಂಡವರು. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ದುಡಿದ ಅನುಭವವಿರುವ ಇವರು ಭಾರತೀಯ ಜನತಾ ಪಕ್ಷ ದೇಶಾದ್ಯಂತ ಬೇರೂರುವಂತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
i
ಅಡ್ವಾಣಿ ತಮ್ಮ ರಥಯಾತ್ರೆ ಮೂಲಕ ದೇಶದ ಉದ್ದಗಲ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಬೇರು ಮಟ್ಟದಲ್ಲಿ ಭದ್ರಪಡಿಸಿದರು 2002 ರಿಂದ 2004ರವರೆಗೆ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ಬಿಜೆಪಿ ಮುಖಂಡ ಅಡ್ವಾಣಿ ಹೆಸರು ಬಾಂಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಕೇಳಿಬಂದಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ