ಪರಿಣಾಮ ಸಾಬೀತಾಗುವವರೆಗೆ ಸಮ-ಬೆಸ ನಿಯಮ ಜಾರಿಗೊಳಿಸುವಂತಿಲ್ಲ: ಎನ್ ಜಿಟಿ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಮ-ಬೆಸ ಸಂಖ್ಯೆ ನಿಯಮ ಜಾರಿಗೊಳಿಸುವುದರಿಂದ ವಾಯು ಮಾಲಿನ್ಯ ನಿಯಂತ್ರಣದ ಮೇಲೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಮ-ಬೆಸ ಸಂಖ್ಯೆ ನಿಯಮ ಜಾರಿಗೊಳಿಸುವುದರಿಂದ ವಾಯು ಮಾಲಿನ್ಯ ನಿಯಂತ್ರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವದಾದರೆ ದೆಹಲಿ ಸರ್ಕಾರ ಅದನ್ನು ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಹೇಳಿದೆ.
ಸಮ-ಬೆಸ ನಿಯಮದ ಪರಿಣಾಮ ಸಾಬೀತಾಗುವವರೆಗೆ ದೆಹಲಿಯಲ್ಲಿ ಅದನ್ನು ಮತ್ತೆ ಜಾರಿಗೊಳಿಸಬೇಡಿ ಎಂದು ದೆಹಲಿ ಸರ್ಕಾರಕ್ಕೆ ಎನ್ ಜಿಟಿ ಸೂಚಿಸಿದೆ. ಅಲ್ಲದೆ ಸಮ-ಬೆಸ ನಿಯಮದಿಂದ ದ್ವಿಚಕ್ರ ವಾಹನ ಮತ್ತು ಮಹಿಳೆಯರಿಗೆ ವಿನಾಯ್ತಿ ನೀಡುವುದನ್ನು ಸಹ ಎನ್ ಜಿಟಿ ಪ್ರಶ್ನಿಸಿದೆ.
ಈ ಮಧ್ಯೆ, ಕಳೆದ ವರ್ಷ ಸಮ-ಬೆಸ ನಿಯಮ ಜಾರಿಗೆ ತಂದಾಗ ಮಾಲಿನ್ಯ ಪ್ರಮಾಣ ಕಡಿಯಾದ ಬಗ್ಗೆ ದೆಹಲಿ ಸರ್ಕಾರ ಯಾವುದೇ ದಾಖಲೆಗಳನ್ನು ನೀಡಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರ ಸಮಿತಿ ಹೇಳಿವೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟಕ್ಕೇರಿದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ನವೆಂಬರ್ 13ರಿಂದ ನವೆಂಬರ್ 17ರ ವರೆಗೆ ಮತ್ತೆ ಸಮ-ಬೆಸ ನಿಯಮ ಜಾರಿಗೆ ತರಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com