ಕೆಲಸದ ಅವಧಿ ಮುಗಿಯಿತೆಂದು ವಿಮಾನವನ್ನು ರನ್ ವೇ ನಲ್ಲೇ ಬಿಟ್ಟು ಹೊರಟ ಪೈಲಟ್, ಪ್ರಯಾಣಿಕರ ಪರದಾಟ

ತನ್ನ ಕೆಲಸನದ ಸಮಯ ಮುಗಿದ ಕಾರಣ ಏರ್ ಇಂಡಿಯಾ ಪೈಲಟ್‌ ವಿಮಾನವನ್ನು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆ ಜೈಪುರದಲ್ಲಿ ನಡೆದಿದೆ.
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ
Updated on
ಜೈಪುರ: ತನ್ನ ಕೆಲಸನದ ಸಮಯ ಮುಗಿದ ಕಾರಣ ಏರ್ ಇಂಡಿಯಾ ಪೈಲಟ್‌ ವಿಮಾನವನ್ನು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆ ಜೈಪುರದಲ್ಲಿ ನಡೆದಿದೆ. ಪೈಲಟ್ ನ ಈ ದಿಢೀರ್ ನಿರ್ಧಾರದಿಂದ ವಿಮಾನದಲ್ಲಿದ್ದ 48 ಪ್ರಯಾಣಿಕರು ಪರದಾಡುವಂತಾಯಿತು.
ಏರ್ ಇಂಡಿಯಾ ಸಂಸ್ಥೆಯ 9ಒನ್‌ 644 ಸಂಖ್ಯೆಯ ವಿಮಾನ ಲಕ್ನೋದಿಂದ ದೆಹಲಿಗೆ ಪ್ರಯಾಣಿಸುವುದಿತ್ತು. ಜೈಪುರಕ್ಕೆ  ರಾತ್ರಿ 9 ಗಂಟೆ ಗೆ ಬರಬೇಕಾಗಿದ್ದ  ವಿಮಾನ  ನಸುಕಿನ 1.30ರ ಹೊತ್ತಿಗ ವಿಮಾನ ಜೈಪುರವನ್ನು ತಲುಪಿದೆ.  
ದೆಹಲಿಯ ಆಗಸದಲ್ಲಿ ದಟ್ಟನೆಯ ಹೊಗೆ ಮತ್ತು ಮಂಜು ತುಂಬಿದ್ದ ಕಾರಣ ನಸುಕಿನವರೆಗೂ ಬೇರೆ ವಿಮಾನಗಳು ಟೇಕಾಫ್ ಆಗಿರಲಿಲ್ಲ
ವಿಮಾನ ಪೈಲಟ್‍ನ ಕೆಲಸದ ಸಮಯ ಮುಗಿದಿದೆ. ಅದಕ್ಕಾಗಿ ಅವರು ವಿಮಾನವನ್ನು ರನ್ ವೇ ನಲ್ಲಿಯೇ ಬಿಟ್ಟು ಹೊರಟಿದ್ದಾರೆ.   "ಪೈಲಟ್‍ನ ಕೆಲಸದ ಸಮಯ ಮುಗಿದಿತ್ತು. ಹೀಗಾಗಿ ಅವರು ವಿಮಾನ ಹಾರಿಸಲು ಸಾಧ್ಯವಿರಲಿಲ್ಲ. ನಾಗರೀಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳ ಪ್ರಕಾರ ಸುರಕ್ಷತೆಯ ಕಾರಣದಿಂದ ಪೈಲಟ್ ಕೆಲಸದ ಸಮಯವನ್ನು ವಿಸ್ತರಿಸಲು ಸಾಧ್ಯವಿರಲಿಲ್ಲ "ಎಂದು ಜೈಪುರದ ಸಂಗನೇರ್ ವಿಮಾನ ನಿಲ್ದಾಣದ  ನಿರ್ದೇಶಕರಾದ ಜೆಎಸ್ ಬಲ್ಹಾರಾ ಹೇಳಿದ್ದಾರೆ.
ಘಟನೆಯಲ್ಲಿ ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಕೆಲವರನ್ನು ಬಸ್ ಮೂಲಕ ದೆಹಲಿಗೆ ಕಳಿಸಿದರೆ ಕೆಲವರಿಗೆ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹಾಗೆ ಉಳಿದುಕೊಂದವರನ್ನು ಇಂದು ಬೆಳಗ್ಗಿನ ವಿಮಾನದಲ್ಲಿ ದೆಹಲಿಗೆ ಕಳಿಸಲಾಯಿತು 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com