ಚೆನ್ನೈ: ನಟ ಕಮಲ್ ಹಾಸನ್ ನಂತರ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಹುಟ್ಟುಹಬ್ಬದಂದೇ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಡಿಸೆಂಬರ್ 12 ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲಿರುವ ರಜನೀಕಾಂತ್ ಅದೇ ದಿನ ಹೊಸ ಪಕ್ಷ ಕಟ್ಟಲಿದ್ದಾರೆಯೇ, ಅಥವಾ ಎಡರಂಗ ಇಲ್ಲವೇ ಬಲ ಪಂಥೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಲಾಗಿದೆ.
ರಜನೀಕಾಂತ್ ಆಗಸ್ಟ್ ತಿಂಗಳಲ್ಲಿ ರಾಜಕೀಯ ಸೇರುವ ಸುಳಿವು ನೀಡಿದ್ದರು. ಮಂಗಳವಾರ ಹಿರಿಯ ನಟ ಕಮಲ್ ಹಾಸನ್ ಹೊಸ ಮೊಬೈಲ್ ಅಪ್ಲಿಕೇಷನ್ ಬಿಡುಗಡೆಗೊಳಿಸಿ ಶೀಘ್ರವೇ ತಮ್ಮ ನೂತನ ಪಕ್ಷ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಅವರು, ಹೊಸ ಪಕ್ಷ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ರೀತಿಯ ತಳ ಮಟ್ಟದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.