ಭಯೋತ್ಪಾದನೆ, ಮೂಲಭೂತವಾದ ನಿಗ್ರಹಿಸಲು ಗೃಹ ಖಾತೆ ಅಡಿಯಲ್ಲಿ 2 ಹೊಸ ವಿಭಾಗಗಳ ಸ್ಥಾಪನೆ

ಭಯೋತ್ಪಾದನೆ ಹಾಗೂ ಮೂಲಭೂತವಾದ ಉಗ್ರವಾದವನ್ನು ನಿಗ್ರಹಿಸಲು ಗೃಹ ಖಾತೆ ಅಡಿಯಲ್ಲಿ 2 ಹೊಸ ವಿಭಾಗಗಳನ್ನು ಪ್ರಾರಂಭಿಸಲಾಗಿದ್ದು, ಸೈಬರ್ ಕ್ರೈಮ್ ಸೇರಿದಂತೆ ಈಗಿರುವ ಭದ್ರತಾ ಸವಾಲುಗಳನ್ನು
ಕೇಂದ್ರ ಗೃಹ ಇಲಾಖೆ
ಕೇಂದ್ರ ಗೃಹ ಇಲಾಖೆ
ನವದೆಹಲಿ: ಭಯೋತ್ಪಾದನೆ ಹಾಗೂ ಮೂಲಭೂತವಾದ ಉಗ್ರವಾದವನ್ನು ನಿಗ್ರಹಿಸಲು ಗೃಹ ಖಾತೆ ಅಡಿಯಲ್ಲಿ 2 ಹೊಸ ವಿಭಾಗಗಳನ್ನು ಪ್ರಾರಂಭಿಸಲಾಗಿದ್ದು, ಸೈಬರ್ ಕ್ರೈಮ್ ಸೇರಿದಂತೆ ಈಗಿರುವ ಭದ್ರತಾ ಸವಾಲುಗಳನ್ನು ಎದುರಿಸುವ ಹೊಣೆಗಾರಿಕೆ ನೀಡಲಾಗಿದೆ. 
ಕೌಂಟರ್ ಟೆರರಿಸಂ, ಕೌಂಟರ್ ರ‍್ಯಾಡಿಕಲೈಸೇಷನ್(ಸಿಟಿಸಿಆರ್) ಹಾಗೂ ಸೈಬರ್ ಆಂಡ್ ಇನ್ಫೋರ್ಮೇಷನ್ ಸೆಕ್ಯುರಿಟಿ (ಸಿಐಎಸ್) ಎಂದು ನಾಮಕರಣ ಮಾಡಲಾಗಿದೆ. ಸಿಟಿಸಿಆರ್ ವಿಭಾಗ ಮೂಲತಃ ಗೃಹ ಇಲಾಖೆಯ ಆಂತರಿಕ ಭದ್ರತೆ-II (ಐಎಸ್-II) ನ ಪರಿವರ್ತಿತ ಆವೃತ್ತಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಿದೆ. ಇನ್ನು ಸಿಐಎಸ್ ವಿಭಾಗ ಸೈಬರ್ ಫ್ರಾಡ್ ಹಾಗೂ ಹ್ಯಾಕಿಂಗ್ ನಂತಹ ಆನ್ ಲೈನ್ ಕ್ರೈಮ್ ಹಾಗೂ ಬೆದರಿಕೆ ಪ್ರಕರಣಗಳ ಬಗ್ಗೆ ಗಮನ ಹರಿಸಲಿದ್ದು, ಇಂತಹ ಪ್ರಕರಣಗಳನ್ನು ನಿಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆಗಳನ್ನು ನೀಡಲಿದೆ. 
ಇನ್ನು ಆಂತರಿಕವಾಗಿಯೇ ಹೆಚ್ಚುತ್ತಿರುವ ಮೂಲಭೂತವಾದವನ್ನು ನಿರ್ನಾಮ ಮಾಡಬೇಕೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಚಿಂತನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೌಂಟರ್ ರ‍್ಯಾಡಿಕಲೈಸೇಷನ್ ವಿಭಾಗವನ್ನು ಸ್ಥಾಪಿಸಲಾಗಿದೆ ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com