ಪಟ್ನಾ ಹೈಕೋರ್ಟ್ ನಿಂದ ನೂತನ ದಾಖಲೆ, ಎರಡೂವರೆ ಗಂಟೆಗಳಲ್ಲಿ 300 ಪ್ರಕರಣದ ತೀರ್ಪು ಪ್ರಕಟ

ಟ್ನಾದ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು 300 ಪ್ರಕರಣಗಳ ವಿಚಾರಣೆ ನಡೆಸಿ ಎರಡೂ ವರೆ ಗಂಟೆಗಳಲ್ಲಿ ತೀರ್ಪು ನೀಡಿದ್ದಾರೆ. ಈ ಮುಖೇನ ನ್ಯಾಯಾಂಗ ವ್ಯವಸ್ಥೆ ಯಲ್ಲಿ ನೂತನ ಇತಿಹಾಸ ದಾಖಲಿಸಿದೆ.
ಪಟ್ನಾ ಹೈಕೋರ್ಟ್ ನಿಂದ ನೂತನ ದಾಖಲೆ, ಎರಡೂವರೆ ಗಂಟೆಗಳಲ್ಲಿ 300 ಪ್ರಕರಣದ ತೀರ್ಪು ಪ್ರಕಟ
ಪಟ್ನಾ ಹೈಕೋರ್ಟ್ ನಿಂದ ನೂತನ ದಾಖಲೆ, ಎರಡೂವರೆ ಗಂಟೆಗಳಲ್ಲಿ 300 ಪ್ರಕರಣದ ತೀರ್ಪು ಪ್ರಕಟ
ಪಟ್ನಾ: ಪಟ್ನಾದ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು 300 ಪ್ರಕರಣಗಳ ವಿಚಾರಣೆ ನಡೆಸಿ ಎರಡೂ ವರೆ ಗಂಟೆಗಳಲ್ಲಿ ತೀರ್ಪು ನೀಡಿದ್ದಾರೆ. ಈ ಮುಖೇನ ನ್ಯಾಯಾಂಗ ವ್ಯವಸ್ಥೆ ಯಲ್ಲಿ ನೂತನ  ಇತಿಹಾಸ ದಾಖಲಿಸಿದೆ.
ಏಳೂವರೆ ತಿಂಗಳಲ್ಲಿ 63,070 ಪ್ರಕರಣಗಳ ವಿಚಾರಣೆ ನಡೆಸಿ 62,061 ಪ್ರಕರಣಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುವ ಮೂಲಕ ಪಟ್ನಾ ಹೈಕೋರ್ಟ್‌ ದಾಖಲೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್‌ ಅವರು ಮಾರ್ಚ್‌ 15ರಂದು ಪಟ್ನಾ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು ಅಂದಿನಿಂದಲೂ  ಅವರು ರಜೆಯನ್ನೇ ತೆಗೆದುಕೊಂಡಿಲ್ಲ. ಅವರ ಪ್ರಯತ್ನದ ಫಲವಾಗಿ ಅಕ್ಟೋಬರ್‌ ಕೊನೆಯ ವೇಳೆಗೆ 62,061 ಪ್ರಕರಣಗಳ ತೀರ್ಪು ಪ್ರಕಟವಾಗಿದೆ. ನವೆಂಬರ್‌ನಲ್ಲಿ ಕೋರ್ಟ್‌ 1,489 ಪ್ರಕರಣಗಳ ತೀರ್ಪು ಪ್ರಕಟಿಸಿದೆ.
ಇದರಲ್ಲಿ ರಾಜೇಂದ್ರ ಮೆನನ್​ ಒಬ್ಬರೇ 300 ಪ್ರಕರಣಗಳಿಗೆ ತೀರ್ಪು ನೀಡಿದ್ದಾರೆ.  
ಪಟ್ನಾ ಹೈ ಕೋರ್ಟ್ ಜುಲೈ ನಲ್ಲಿ 1266, ಸೆಪ್ಟಂಬರ್‌ ನಲ್ಲಿ1056, ಅಕ್ಟೋಬರ್‌ ನಲ್ಲಿ1189 , ನವೆಂಬರ್‌ ನಲ್ಲಿ 1489 ಪ್ರಕರಣದ ಸಂಬಂಧ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿ ರವಿರಂಜನ್​ ಇದ್ದ ಏಕ ಸದಸ್ಯ ಪೀಠ ಜಾಮೀನಿಗೆ ಸಂಬಂಧಿಸಿದ 300 ಪ್ರಕರಣಗಳನ್ನು ಬುಧವಾರದಂದು ವಿಚಾರಣೆಗೆ ತೆಗೆದುಕೊಂಡಿದ್ದು ಅವುಗಳಲ್ಲಿ 289 ಪ್ರಕರಗಳಿಗ ತೀರ್ಪು ನೀಡಿದೆ. ಉಳಿದ 11 ಪ್ರಕರಣ ಸಂಬಂಧ  ವಕೀಲರು ಹಾಜರಿಲ್ಲದ ಕಾರಣ ತೀರ್ಪು ಮುಂದೂಡಲಾಗಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com