ರಾಜಕಾರಣಿಗಳು ದೇಶಕ್ಕಿಂತ ದೊಡ್ಡವರಲ್ಲ: ಜಾವೇದ್ ಅಖ್ತರ್

ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್
ಜಾವೇದ್ ಅಖ್ತರ್
ನವದೆಹಲಿ: ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ. 
ಸಾಹಿತ್ಯ ಆಜ್ ತಕ್ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟ್ರವಿರೋಧಿ ಮನಸ್ಥಿತಿಯ ಬಗ್ಗೆ ಮಾತನಾಡಿರುವ ಜಾವೇದ್ ಅಖ್ತರ್, ರಾಷ್ಟ್ರಪ್ರೇಮವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ತಮ್ಮನ್ನೇ ರಾಷ್ಟ್ರ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ, ಒಂದು ವೇಳೆ ಅದನ್ನು ವಿರೋಧಿಸಿದರೆ ನೀವು ರಾಷ್ಟ್ರವಿರೋಧಿಗಳಾಗುತ್ತೀರಿ. ರಾಜಕಾರಣಿಗಳು ರಾಷ್ಟ್ರಕ್ಕಿಂತ ದೊಡ್ಡವರಲ್ಲ, ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ತಾವು ರಾಷ್ಟ್ರಕ್ಕಿಂತ ದೊಡ್ಡವರೆಂದುಕೊಂಡರೆ ಅದು ತಪ್ಪು ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. 
ಇದೇ ವೇಳೆ ಮುಸ್ಲಿಮರ ಬಗ್ಗೆಯೂ ಮಾತನಾಡಿರುವ ಜಾವೇದ್ ಅಖ್ತರ್, ಓರ್ವ ಜಾತ್ಯಾತೀತ ಮುಸಲ್ಮಾನ ಎಂದಿಗೂ ಎಲ್ಲಿಯೂ ಸಲ್ಲುವುದಿಲ್ಲ. ಮುಸ್ಲಿಮರು ಭಾರತೀಯರಲ್ಲ ಎಂದು ಪರಿಗಣಿಸುವುದು ದೃರದೃಷ್ಟಕರ ಟಿಪ್ಪು ಸುಲ್ತಾನ್ ಓರ್ವ ಹಿಂದೂಸ್ಥಾನಿಯಲ್ಲ, ಇದನ್ನು ಒಪ್ಪದೇ ಇದ್ದರೆ ನಾನು ರಾಷ್ಟ್ರವಿರೋಧಿಯಾಗುತ್ತೇನೆಯೇ? ಒಂದು ವೇಳೆ ಒಪ್ಪದೇ ಇರುವುದರಿಂದ ನಾನು ರಾಷ್ಟ್ರವಿರೋಧಿಯೆಂಬುದಾದರೆ, ನಾನು ರಾಷ್ಟ್ರವಿರೋಧಿಯೇ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com