ಸುಪ್ರೀಂ ಕೋರ್ಟ್ ತೀರ್ಪನ್ನೂ ಲೆಕ್ಕಿಸದೇ ಪತ್ನಿಗೆ ತಲಾಖ್ ನೀಡಿದ ಅಲೀಘರ್ ಮುಸ್ಲಿಂ ವಿವಿ ಪ್ರೊಫೆಸರ್!

ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ 2 ತಿಂಗಳ ಹಿಂದೆ ತೀರ್ಪು ನೀಡಿತ್ತಾದರೂ ಈ ತೀರ್ಪನ್ನು ಲೆಕ್ಕಿಸದೇ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರೊಫೆಸರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾರೆ.
ತ್ರಿವಳಿ ತಲಾಖ್
ತ್ರಿವಳಿ ತಲಾಖ್
ಆಗ್ರಾ: ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ 2 ತಿಂಗಳ ಹಿಂದೆ ತೀರ್ಪು ನೀಡಿತ್ತಾದರೂ ಈ ತೀರ್ಪನ್ನು ಲೆಕ್ಕಿಸದೇ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರೊಫೆಸರ್ ತನ್ನ ಪತ್ನಿಗೆ ತಲಾಖ್ ನೀಡಿದ್ದಾರೆ. 
ಪ್ರೊಫೆಸರ್ ಖಾಲೀದ್ ಬಿನ್ ಯೂಸೂಫ್ ಖಾನ್ ತನ್ನ ಪತ್ನಿಗೆ ವಾಟ್ಸ್ ಆಪ್ ನಲ್ಲಿ ತಲಾಖ್ ನೀಡಿರುವ ವ್ಯಕ್ತಿಯಾಗಿದ್ದಾರೆ. ಪತಿ ತಲಾಖ್ ನೀಡಿರುವುದನ್ನು ವಿರೋಧಿಸಿರುವ ಪತ್ನಿ, ತನಗೆ ನ್ಯಾಯ ಸಿಗದೇ ಇದ್ದರೆ ವಿಶ್ವವಿದ್ಯಾನಿಲಯದ ಉಪಕುಲಪತಿ ನಿವಾಸದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. 
ಯಸ್ಮೀನ್ ಖಾಲೀದ್ ತಲಾಖ್ ನ ಸಂತ್ರಸ್ತೆಯಾಗಿದ್ದು, ಮೊದಲು ವಾಟ್ಸ್ ಆಪ್ ನಲ್ಲಿ ತಲಾಖ್ ನೀಡಿದ್ದಾರೆ. ನಂತರ ಟೆಕ್ಸ್ಟ್ ಮೆಸೇಜ್ ಮೂಲಕ ತಲಾಖ್ ನೀಡಿದ್ದಾರೆ. ಈಗ ತಮಗೆ ಹಾಗೂ ತಮ್ಮ ಮಕ್ಕಳಿಗೆ ಅನ್ಯಾಯವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿದ್ದಾರೆ.  ಒಂದು ವೇಳೆ ತಮಗೆ ನ್ಯಾಯ ಸಿಗದೇ ಹೋದಲ್ಲಿ ವಿಶ್ವವಿದ್ಯಾನಿಲಯದ ಉಪಕುಲಪತಿ ತರೀಖ್ ಮನ್ಸೂರ್ ಅವರ ನಿವಾಸದ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 
ಇನ್ನು ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಖಾನ್, ಕೇವಲ ವಾಟ್ಸ್ ಆಪ್, ಟೆಕ್ಸ್ಟ್ ಮೆಸೇಜ್ ನಲ್ಲಿ ತಲಾಖ್ ನೀಡಿರುವುದಷ್ಟೇ ಅಲ್ಲದೇ ಶರಿಯಾ ಪ್ರಕಾರ ಮತ್ತೂ ಒಂದು ತಲಾಖ್ ನೀಡುವುದಾಗಿ ಇಬ್ಬರ ಸಮ್ಮುಖದಲ್ಲಿ ಹೇಳಿರುವುದಾಗಿ ಖಾನ್ ತಿಳಿಸಿದ್ದಾರೆ. ಪ್ರಕರಣದಲ್ಲಿ ತಾವೇ ಬಲಿಪಶು ಎಂದು ಹೇಳಿಕೊಂಡಿರುವ ಖಾನ್ ನಮ್ಮ ವಿವಾಹಕ್ಕೂ ಮುನ್ನ ಆಕೆ ತಾನು ಪದವೀಧರೆ ಎಂದು ನನಗೆ ಸುಳ್ಳು ಮಾಹಿತಿ ನೀಡಿದ್ದಾಳೆ, ಆದ್ದರಿಂದ ಆಕೆಗೆ ಮೂರನೆ ತಲಾಖ್ ನ್ನೂ ನೀಡುತ್ತೇನೆ, ಯಾರೂ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com