ಎನ್ ಜಿಟಿ ವಿನಾಯಿತಿ ನೀಡಿದರಷ್ಟೇ ಸಮ-ಬೆಸ ಸಂಖ್ಯೆ ನೀತಿ ಪರಿಗಣನೆ: ದೆಹಲಿ ಸರ್ಕಾರ

ಎನ್ ಜಿಟಿಯ ಒಪ್ಪಿಗೆಯ ಹೊರತಾಗಿಯೂ ಎನ್ ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶವನ್ನು ವಾಪಸ್ ಪಡೆದಿದ್ದ ದೆಹಲಿ ಸರ್ಕಾರ, ಈಗ ಎನ್ ಜಿಟಿ ಕೆಲವು ವಿನಾಯಿತಿಗಳನ್ನು ನೀಡಿದರಷ್ಟೇ
ಎನ್ ಜಿಟಿ ವಿನಾಯಿತಿ ನೀಡಿದರಷ್ಟೇ ಸಮ-ಬೆಸ ಸಂಖ್ಯೆ ನೀತಿ ಪರಿಗಣನೆ: ದೆಹಲಿ ಸರ್ಕಾರ
ಎನ್ ಜಿಟಿ ವಿನಾಯಿತಿ ನೀಡಿದರಷ್ಟೇ ಸಮ-ಬೆಸ ಸಂಖ್ಯೆ ನೀತಿ ಪರಿಗಣನೆ: ದೆಹಲಿ ಸರ್ಕಾರ
ನವದೆಹಲಿ: ಎನ್ ಜಿಟಿಯ ಒಪ್ಪಿಗೆಯ ಹೊರತಾಗಿಯೂ ಎನ್ ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶವನ್ನು ವಾಪಸ್ ಪಡೆದಿದ್ದ ದೆಹಲಿ ಸರ್ಕಾರ, ಈಗ ಎನ್ ಜಿಟಿ ಕೆಲವು ವಿನಾಯಿತಿಗಳನ್ನು ನೀಡಿದರಷ್ಟೇ ಸಮ-ಬೆಸ ಸಂಖ್ಯೆ  ನೀತಿಯನ್ನು ಪರಿಗಣಿಸುವುದಾಗಿ ಹೇಳಿದೆ. 
ಯಾವುದೇ ವಿನಾಯಿತಿ ಇಲ್ಲದೇ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೊಳಿಸಬೇಕೆಂದು ಎನ್ ಜಿಟಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮವನ್ನು ಜಾರಿಗೊಳಿಸದೇ ಇರಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್, ಎನ್ ಜಿಟಿ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೆ ತರಲು ಕೆಲವು ವಿನಾಯಿತಿಗಳನ್ನು ನೀಡಿದರೆ ಸಮ-ಬೆಸ ಸಂಖ್ಯೆಯನ್ನು ಜಾರಿಗೆ ತರಬಹುದೆಂದು ಹೇಳಿದ್ದಾರೆ. 
ಎನ್ ಜಿಟಿಯ ಆದೇಶವನ್ನು ನಾವು ಗೌರವಿಸುತ್ತೇವೆ, ಮಹಿಳೆಯರ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಒಂದು ವೇಳೆ ಮಹಿಳೆಯರು ಹಾಗೂ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡದೇ ಇದ್ದಲ್ಲಿ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೊಳಿಸುವುದು ಸವಾಲಿನ ಸಂಗತಿ ಎಂದು ದೆಹಲಿ ಸಾರಿಗೆ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com