ಜಮ್ಮು ಮತ್ತು ಕಾಶ್ಮೀರದ ಮೇಲ್ಮನೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷ

ಜಮ್ಮು ಕಾಶ್ಮೀರದ ಮೇಲ್ಮನೆಯಲ್ಲಿ ಭಾರತೀಯ ಜನತಾಪಕ್ಷ(ಬಿಜೆಪಿ) ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ...
ಬಿಜೆಪಿ
ಬಿಜೆಪಿ
ಶ್ರೀನಗರ: ಜಮ್ಮು ಕಾಶ್ಮೀರದ ಮೇಲ್ಮನೆಯಲ್ಲಿ ಭಾರತೀಯ ಜನತಾಪಕ್ಷ(ಬಿಜೆಪಿ) ಏಕೈಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 
33 ಸದಸ್ಯರನ್ನು ಹೊಂದಿರುವ ವಿಧಾನ ಪರಿಷತ್ ನಲ್ಲಿ ಬಿಜೆಪಿ 11 ಸದಸ್ಯರನ್ನು ಹೊಂದುವ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪೀಪಲ್ಸ್ ಡೆಮೊಕ್ರಟಿಕ್ ಪಾರ್ಟಿ 10 ಸದಸ್ಯರನ್ನು ಹೊಂದಿದ್ದು ವಿಪಕ್ಷ ನ್ಯಾಷನಲ್ ಕಾನ್ಫರೇನ್ಸ್ ಮತ್ತು ಕಾಂಗ್ರಸ್ ತಲಾ 6 ಸದಸ್ಯರನ್ನು ಹೊಂದಿದೆ. 
ಈ ಹಿಂದೆ ಪಿಡಿಪಿ ಮತ್ತು ಬಿಜೆಪಿ ತಲಾ 11 ಸದಸ್ಯರನ್ನು ಹೊಂದಿದ್ದವು. ಆದರೆ ಪಿಡಿಪಿಯ ಶಾಸಕ ಕಾಶ್ಮೀರ ಮಹಾರಾಜ ಹರಿಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಅವರು ಪಕ್ಷ ಮತ್ತು ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಹಿನ್ನಲೆಯಲ್ಲಿ ಅದರ ಸ್ಥಾನ 10ಕ್ಕೆ ಇಳಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com