ಕೊಚ್ಚಿ ವಿಮಾನ ನಿಲ್ದಾಣದಲ್ಲಿ ‘ಹ್ಯಾಪಿ ಬಾಂಬ್‌’ಎಂದ ವಿಡಿಯೋ ಜಾಕಿಯ ಬಂಧನ

ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಹ್ಯಾಪಿ ಬಾಂಬ್‌’ಬಳಸಿ ತಾನು ಪ್ರಯಾಣಿಸುವ ಜೆಟ್ ಏರ್ ವೇಸ್ ವಿಮಾನವನ್ನು ಹೈಜಾಕ್.....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕೊಚ್ಚಿ: ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಹ್ಯಾಪಿ ಬಾಂಬ್‌’ಬಳಸಿ ತಾನು ಪ್ರಯಾಣಿಸುವ ಜೆಟ್ ಏರ್ ವೇಸ್ ವಿಮಾನವನ್ನು ಹೈಜಾಕ್ ಮಾಡಲಾಗುತ್ತಿದೆ ಎಂದ ಮುಂಬೈ ಮೂಲದ ವಿಡಿಯೋ ಜಾಕಿಯೊಬ್ಬರನ್ನು ಸೋಮವಾರ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ವಿಡಿಯೋ ಜಾಕಿಯನ್ನು ತ್ರಿಶೂರ್‌ ಜಿಲ್ಲೆಯ ಕ್ಲಿನ್ಸ್ ವರ್ಗೀಸ್‌ ಎಂದು ಗುರುತಿಸಲಾಗಿದ್ದು, ಮುಂಬೈನಲ್ಲಿ ಎಂಟಿವಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ವರ್ಗೀಸ್ ಬೋರ್ಡಿಂಗ್ ವೇಳೆ ವಿಡಿಯೋದಲ್ಲಿ ಹ್ಯಾ‍ಪಿ ಬಾಂಬ್‌ ಎಂದು ಹೇಳುತ್ತಿರುವುದ್ದನ್ನು ಜೆಟ್‌ ಏರ್‌ವೇಸ್‌ನ ನೌಕರರೊಬ್ಬರು ಗಮನಿಸಿದ್ದು, ಅದನ್ನು ಹಿರಿಯ ಅಧಿಕಾರಿಗೆ ತಿಳಿಸಿದ್ದಾರೆ. ಅವರು ಕೂಡಲೇ ವಿಷಯವನ್ನು ಸಿಐಎಸ್‌ಎಫ್‌ ಹಾಗೂ ಟರ್ಮಿನಲ್‌ ವ್ಯವಸ್ಥಾಪಕರ ಗಮನಕ್ಕೂ ತಂದಿದ್ದಾರೆ.
ಕೊಚ್ಚಿಯಿಂದ ಮುಂಬೈಗೆ ಹೋಗಬೇಕಿದ್ದ ವರ್ಗೀಸ್ ಅವರನ್ನು ವಿಮಾನದಿಂದ ಇಳಿಸಿ ಅವರ ಬ್ಯಾಗುಗಳನ್ನು ತಪಾಸಣೆ ನಡೆಸಲಾಯಿತು. ಆನಂತರ ಅವರನ್ನು ಪೊಲೀಸರ ವಶಕ್ಕೆ ನೀಡಲಾಯಿತು. ತಾನು ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುತ್ತಿದ್ದಾಗ ಗೆಳೆಯನೊಂದಿಗೆ ಸಂತಸ ಹಂಚಿಕೊಂಡಿದ್ದಾಗಿ ವರ್ಗೀಸ್ ವಿಚಾರಣೆ ವೇಳೆ ಹೇಳಿದ್ದಾರೆ. ಇವರೊಂದಿಗೆ ಇದ್ದ ಮತ್ತೊಬ್ಬರನ್ನೂ ವಿಮಾನದಿಂದ ಇಳಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇದಲ್ಲದೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಇಳಿಸಿ ತೀವ್ರ ಶೋಧನ ನಡೆಸಿ ನಂತರ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದಾಗಿ ವಿಮಾನ ಎರಡು ಗಂಟೆ ತಡವಾಗಿ ಹಾರಾಟ ನಡೆಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com