ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್

ಹಾರ್ದಿಕ್ ಪಟೇಲ್ ರಲ್ಲಿ ಸರ್ದಾರ್ ಪಟೇಲ್ ಡಿಎನ್ಎ: ಕಾಂಗ್ರೆಸ್, ಬಿಜೆಪಿ ತೀವ್ರ ಟೀಕೆ

ಗುಜರಾತ್ ನ ಪಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ....
ಅಹಮದಾಬಾದ್: ಗುಜರಾತ್ ನ ಪಟಿದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಡಿಎನ್ಎ ಇದೆ ಎಂದು ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರು ಮಂಗಳವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಾರ್ದಿಕ್ ಪಟೇಲ್ ವಿರುದ್ಧದ ಸೆಕ್ಸ್ ಸಿಡಿಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗುಜರಾತ್ ಕಾಂಗ್ರೆಸ್ ಹಿರಿಯ ನಾಯಕ ಶಕ್ತಿ ಸಿಂಗ್ ಗೊಹಿಲ್ ಅವರು, ಹಾರ್ದಿಕ್ ಪಟೇಲ್ ಅವರಲ್ಲಿರುವುದು ಸರ್ದಾರ್ ಪಟೇಲ್ ಡಿಎನ್ಎ. ಹೀಗಾಗಿ ಅವರನ್ನು ಬಗ್ಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ. ಅವರು ತಮ್ಮ ಸಮುದಾಯಕ್ಕೆ ಆದ ಅನ್ಯಾಯವನ್ನು ಪ್ರಶ್ನಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಜೈಲಿಗೆ ಕಳುಹಿಸಿದರು ಹಾರ್ದಿಕ್ ಪಟೇಲ್ ಬಗ್ಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕನ ಈ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಾರ್ದಿಕ್ ಪಟೇಲ್ ಅವರನ್ನು ಸರ್ದಾರ್ ಪಟೇಲ್ ಅವರಿಗೆ ಹೋಲಿಕೆ ಮಾಡುವ ಮೂಲಕ ದೇಶದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯನಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.
ಹಾರ್ದಿಕ್ ಪಟೇಲ್ ಅವರನ್ನು ಸರ್ದಾರ್ ಪಟೇಲ್ ಅವರಿಗೆ ಹೋಲಿಕೆ ಮಾಡುವ ಮೂಲಕ ಕಾಂಗ್ರೆಸ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರನಿಗೆ, ರಾಜ್ಯ ಮತ್ತು ದೇಶಕ್ಕೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಮನ್ಸುಖ್ ಮಂಡವಿಯಾ ಅವರು ಹೇಳಿದ್ದಾರೆ.
ಇನ್ನು ಸರ್ದಾರ್ ಪಟೇಲ್ ಅವರ ಸಂಬಂಧಿಯೂ ಕಾಂಗ್ರೆಸ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಆ ಇಬ್ಬರನ್ನು ಹೋಲಿಕೆ ಮಾಡುವುದು ಸರಿಯಲ್ಲ. ಸರ್ದಾರ್ ಪಟೇಲ್ ಅವರು ಏಕೀಕರಿಸುವುದಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ ಹಾರ್ದಿಕ್ ಪಟೇಲ್ ಇಬ್ಭಾಗ ಮಾಡುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com