ಉತ್ತರ ಭಾರತದ ನಗರಗಳಲ್ಲಿ ಇನ್ನೂ ಕೆಲವು ತಿಂಗಳು ವಾಯು ಗುಣಮಟ್ಟ ಕಳಪೆ: ಅಮೆರಿಕ ಹವಾಮಾನ ಸಂಘಟನೆ

ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು...
ದೆಹಲಿ ವಾಯು ಮಾಲಿನ್ಯ- ಸಾಂದರ್ಭಿಕ ಚಿತ್ರ
ದೆಹಲಿ ವಾಯು ಮಾಲಿನ್ಯ- ಸಾಂದರ್ಭಿಕ ಚಿತ್ರ
ವಾಷಿಂಗ್ ಟನ್: ಉತ್ತರ ಭಾರತದ ಮತ್ತು ಪಾಕಿಸ್ತಾನದ ವಾಯು ಮಾಲಿನ್ಯ ಪೀಡಿತ ನಗರಗಳಲ್ಲಿ ಮುಂದಿನ ಹಲವು ತಿಂಗಳ ಕಾಲ ವಾಯು ಗುಣಮಟ್ತವು ಅಪಾಯಕಾರಿ ಮಟ್ಟದಲ್ಲಿರಲಿದೆ ಎಂದು ಅಮೆರಿಕಾದ ಉನ್ನತ ಹವಾಮಾನ ಸಂಘಟನೆ ಹೇಳಿದೆ, ಇದು ಜನರ ಆರೋಗ್ಯದ ಮೇಲೆ ಅಪಾಯಕರವಾಗಿ ಪರಿಣಮಿಸಲಿದೆ ಎಂದು ಸಂಸ್ಥೆಯ  ವರದಿಯಲ್ಲಿ ಹೇಳಲಾಗಿದೆ.
"ಉತ್ತರ ಭಾರತ ಹಾಗು ಪಾಕಿಸ್ತಾನದಲ್ಲಿ ಇದೀಗ ತಾನೆ ಮಂಜಿನ ಋತು  ಪ್ರಾರಂಭವಾಗಿದೆ. ಇದೀಗ ತಾನೆ ಮುಂಗಾರು ಕಳೆದು ಚಳಿಗಾಲ ಪ್ರಾರಂಭವಾಗಬೇಕಿದೆ. ಇದರ ಅರ್ಥ ಶೀತ ಗಾಳಿಯಲ್ಲಿ ಮಾಲಿನ್ಯವೂ ಸೇರಿ ಜನರ ಆರೋಗ್ಯದ ಮೇಲೆ ಅತೀವ ದುಷ್ಪರಿನಾಮ ಬೀರಲಿದೆ" ಎಂದು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಸಂಸ್ಥೆ (ಎನ್ ಓ ಎ ಎ) ಹೇಳಿಕೆಯಲ್ಲಿ ತಿಳಿಸಿದೆ.
ಎನ್ ಓ ಎ ಎ ಬಿಡುಗಡೆಗೊಳಿಸಿದ ಉಪಗ್ರಹ ಚಿತ್ರಗಳು ಮತ್ತು ಉತ್ತರ ಭಾರತ ಮತ್ತು ಪಾಕಿಸ್ತಾನದ ಪ್ರಮುಖ ಭಾಗಗಳಲ್ಲಿ ಇಂತಹ ಮಾಲಿನ್ಯ ವಾತಾವರಣದ ಕಾರಣಗಳನ್ನು ವಿವರಿಸಿದೆ. ಇಂಧನಗಳ ದಹನದಿಂದ ಉಂಟಾಗುವ ವ್ಯಾಪಕ ಹೊಗೆ, ಮತ್ತು ಹುಲ್ಲು, ಕಳೆಗಳನ್ನು  ಸುಡುವ ಕಾರಣದಿಂದ ಉತ್ತರ ಭಾರತ ಮತ್ತು ಪಾಕಿಸ್ತಾನದ ನಗರಗಳಲ್ಲಿ ವಾತಾವರಣ ಅಪಾಯಕಾರಿಯಾಗಿದೆ ಎಂದು ಅದು ಹೇಳಿದೆ.
ವಾತಾವರಣದಲ್ಲಿ ವಿಲೋಮ ಪದರವಿರುವ ಸಮಯದಲ್ಲಿ ಈ ದಟ್ಟ ಹೊಗೆಪೂರಿತ ವಿಷಕಾರಿ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎನ್ ಓಓಎ ತಿಳಿಸಿದೆ. ವಾಯುಮಂಡಲದಲ್ಲಿ ಸಾಕಷ್ಟು ಗಾಳಿಯ ಚಲನೆ ಇಲ್ಲದ ಸಮಯದಲ್ಲಿ ಸಂದರ್ಭಗಳಲ್ಲಿ ವಿಲೋಮದ ಪದರವು ಉಂಟಾಗುತ್ತದೆ.
ನವದೆಹಲಿ ಮತ್ತು ಉತ್ತರ ಭಾರತದ ಅನೇಕ ಇತರ ರಾಜ್ಯಗಳಲ್ಲಿ ಒಂದು ವಾರದಿಂದ ದಟ್ಟ ಹೊಗೆ ಸಹಿತ ವಿಷಗಾಳಿ ಆವರಿಸಿದೆ. ಇದಕ್ಕಾಗಿ ಕಟ್ಟಡ ನಿರ್ಮಾಣ, ಇಟ್ಟಿಗೆ ಸುಡುವುದು ಸೇರಿ ಅನೇಕ ಹೊಗೆ, ಮಾಲಿನ್ಯಕಾರಕ ಕಾರ್ಯಗಳನ್ನು ನಿಷೇಧಿಸುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com