ಕೇಜ್ರಿವಾಲ್ ಕುರಿತ ಸಾಕ್ಷ್ಯಚಿತ್ರ 'ಆನ್ ಇನ್ ಸಿಗ್ನಿಫಿಕೆಂಟ್ ಮ್ಯಾನ್' ನಿಷೇಧಕ್ಕೆ ಸುಪ್ರೀಂ ನಕಾರ

ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕುರಿತ ಸಾಕ್ಷ್ಯಚಿತ್ರ 'ಆನ್ ಇನ್ ಸಿಗ್ನಿಫಿಕೆಂಟ್....
ಸಾಕ್ಷ್ಯ ಚಿತ್ರದ ಸ್ಟಿಲ್
ಸಾಕ್ಷ್ಯ ಚಿತ್ರದ ಸ್ಟಿಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಕುರಿತ ಸಾಕ್ಷ್ಯಚಿತ್ರ 'ಆನ್ ಇನ್ ಸಿಗ್ನಿಫಿಕೆಂಟ್ ಮ್ಯಾನ್' ನಿಷೇಧಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
'ಆನ್ ಇನ್ ಸಿಗ್ನಿಫಿಕೆಂಟ್ ಮ್ಯಾನ್' ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಚಿತ್ರ ನಿರ್ಮಾಪಕರು ಮತ್ತು ಬರಹಗಾರರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸಲು ಅವಕಾಶ ನೀಡಬೇಕು ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಸಾಕ್ಷ್ಯ ಚಿತ್ರ ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ 'ಆನ್ ಇನ್ ಸಿಗ್ನಿಫಿಕೆಂಟ್ ಮ್ಯಾನ್' ನಿಗದಿಯಂತೆ ನಾಳೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
ದೆಹಲಿ ಸಿಎಂ ಕುರಿತು ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕು ಮತ್ತು ಚಿತ್ರ ನಾಳೆ ಬಿಡುಗಡೆಯಾಗದಂತೆ ತಡೆ ಕೋರಿ ನಚಿಕೇತ ವಾಲಾಕರ್ ಅವರು ಅರ್ಜಿ ಸಲ್ಲಿಸಿದ್ದರು.
ವಾಲಾಕರ್ ಅವರು 2013ರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಸಿ ಬಳಿದ ಆರೋಪ ಎದುರಿಸುತ್ತಿದ್ದು, ಸಾಕ್ಷ್ಯ ಚಿತ್ರದಲ್ಲಿ ಆ ಘಟನೆಯನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ದೂರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com