ಅಯೋಧ್ಯಾ ವಿವಾದ ಮಧ್ಯಸ್ಥಿಕೆಗೆ ಇದು ಸೂಕ್ತ ಸಮಯ: ಶ್ರೀ ಶ್ರೀ ರವಿಶಂಕರ್

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮಾತುಕತೆಗಳು ಆರಂಭಿಸಿದ್ದಾರೆ.
ಶ್ರೀ ಶ್ರೀ ರವಿಶಂಕರ್
ಶ್ರೀ ಶ್ರೀ ರವಿಶಂಕರ್
Updated on
ಅಯೋಧ್ಯೆ : ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಗುರುವಾರ ರಾಮ ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಮಾತುಕತೆಗಳು ಆರಂಭಿಸಿದ್ದಾರೆ, "ಒಂದು ನಿರ್ಧಾರಕ್ಕೆ ಬರಲು ಇದು ಒಳ್ಳೆಯ ಪ್ರಾರಂಭವಾಗಿದೆ" ಎಂದು ಅವರು ಹೇಳಿದ್ದಾರೆ.
"ಇದೀಗ ಕಾಲ ಸೂಕ್ತವಾಗಿದೆ, ಜನರು ಈ ಸಂಘರ್ಷದಿಂದ ಹೊರಬರಲು ಬಯಸುತ್ತಾರೆ,ಇದು ಅಷ್ಟೊಂದು ಸುಲಭವಲ್ಲವೆಂದು ನನಗೂ ತಿಳಿದಿದೆ, ನಾನು ಎಲ್ಲರೊಡನೆ ಮಾತಾಡುತ್ತೇನೆ" ಶ್ರೀ ಶ್ರೀ ರವಿಶಂಕರ್ ಮಾದ್ಯಮದೊಡನೆ ಮಾತನಾಡುತ್ತಾ ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕರು ಇಂದು ಅಯೋಧ್ಯೆಯನ್ನು ತಲುಪಿದ್ದಾರೆ.ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಮಧ್ಯಸ್ಥಗಾರರೊಂದಿಗೆ ಮಾತುಕತೆಗಳನ್ನು ನಡೆಸುವುದಾಗಿ ಶ್ರೀ ಶ್ರೀ ರವಿಶಂಕರ್ ಅವರು ಘೋಷಿಸುವ ಮೂಲಕ ರಾಮ ಮಂದಿರ ವಿವಾದವು ಮತ್ತೆ ಮುನ್ನೆಲೆಗೆ ಬಂದಿದೆ. 
ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. "ನಾನು ಯಾವುದೇ ಅಜೆಂಡಾವನ್ನು ಹೊಂದಿಲ್ಲ ಮತ್ತು ಪ್ರತಿಯೊಬ್ಬರ ಮಾತುಗಳನ್ನು ಕೇಳುತ್ತೇನೆ" ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸಹ ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ್ದು,ಸುಪ್ರೀಂ ಕೋರ್ಟ್ ನಲ್ಲಿರುವ  ಕಾನೂನು ಪ್ರಕ್ರಿಯೆಯನ್ನು  ಮೊದಲು ಪೂರ್ಣಗೊಳಿಸಬೇಕು, ಆ ನಂತರ ಇತರೆ ಆಯ್ಕೆಗಲನ್ನು ಪರಿಶೀಲಿಸಬಹುದಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವಿಶಂಕರ್ ಅವರ ಮಧ್ಯಸ್ಥಿಕೆಯನ್ನು ಸ್ವಾಗತಿಸಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com