ಜೆಡಿಯು
ದೇಶ
ಜೆಡಿಯು ವಿನ ನಿತೀಶ್ ಬಣಕ್ಕೆ ಜೆಡಿಯು ಬಾಣದ ಚಿಹ್ನೆ ನೀಡಿದ ಚುನಾವಣಾ ಆಯೋಗ
ಜೆಡಿಯು ಪಕ್ಷದ ಭಿನ್ನಮತೀಯ ಬಣಕ್ಕೆ ಹಿನ್ನಡೆಯುಂಟಾಗಿದ್ದು, ಚುನಾವಣಾ ಆಯೋಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣಕ್ಕೆ ಜೆಡಿಯು ಪಕ್ಷದ ಚಿಹ್ನೆಯನ್ನು ನೀಡಿದೆ.
ನವದೆಹಲಿ: ಜೆಡಿಯು ಪಕ್ಷದ ಭಿನ್ನಮತೀಯ ಬಣಕ್ಕೆ ಹಿನ್ನಡೆಯುಂಟಾಗಿದ್ದು, ಚುನಾವಣಾ ಆಯೋಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣಕ್ಕೆ ಜೆಡಿಯು ಪಕ್ಷದ ಚಿಹ್ನೆಯನ್ನು ನೀಡಿದೆ.
ನಿತೀಶ್ ಕುಮಾರ್ ಬಣಕ್ಕೆ ಶಾಸಕರಿಂದ ಅತಿ ಹೆಚ್ಚು ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಗುರುತಾಗಿರುವ ಬಾಣದ ಗುರುತನ್ನು ನಿತೀಶ್ ಕುಮಾರ್ ಬಣಕ್ಕೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದ್ದು, ನಿತೀಶ್ ಕುಮಾರ್ ನೇತೃತ್ವದ ಬಣವನ್ನು ಅಧಿಕೃತ ಜೆಡಿಯು ಎಂದು ಹೇಳಲಾಗಿದೆ.
ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿದ್ದನ್ನು ವಿರೋಧಿಸಿದ್ದ ಜೆಡಿಯು ನಾಯಕ ಶರದ್ ಯಾದವ್ ಪಕ್ಷದ ಚಿಹ್ನೆ ತಮಗೆ ಸೇರಬೇಕೆಂದು ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ