ವಿಶ್ವ ಶೌಚಾಲಯ ದಿನ: ದೇಶದ ನೈರ್ಮಲ್ಯ ಸುಧಾರಣೆಗೆ ಕೇಂದ್ರ ಬದ್ದವಾಗಿದೆ, ಮೋದಿ ಟ್ವೀಟ್

ವಿಶ್ವ ಶೌಚಾಲಯ ದಿನಾಚರಣೆಯ ನೆಪದಲ್ಲಿ ದೇಶದ ನೈರ್ಮಲ್ಯ ಸುಧಾರಣೆ ಬಗ್ಗೆ ಕೇಂದ್ರದ ಬದ್ಧತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪುನರುಚ್ಚರಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ವಿಶ್ವ ಶೌಚಾಲಯ ದಿನಾಚರಣೆಯ ನೆಪದಲ್ಲಿ ದೇಶದ ನೈರ್ಮಲ್ಯ ಸುಧಾರಣೆ ಬಗ್ಗೆ ಕೇಂದ್ರದ ಬದ್ಧತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪುನರುಚ್ಚರಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಸಣ್ಣ ವೀಡಿಯೋ ಕ್ಲಿಪ್ಪಿಂಗ್ ನ್ನು ಪೋಸ್ಟ್ ಮಾಡಿರುವ ಪ್ರಧಾನಿ, ದೇಶವನ್ನು ಬಯಲು ಬಹಿರ್ದೆಶೇಯಿಂದ  ಮುಕ್ತಾಯಗೊಳಿಸುವ ನಿಲುವಿನ ಮಹತ್ವವನ್ನು ಪುನರುಚ್ಚರಿಸಿದರು, ಇದು "ಮಹಿಳೆಯರಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ" ಎಂದು ಅವರು ಹೇಳಿದರು.
ಅವರು ಸ್ವಚ್ಚ ಬಾರತ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ನಿರ್ಮಿಸಲಾಗಿದ್ದ ಶೌಚಾಲಯಗಳ ಕುರಿತು ಸಹ ಈವೀಡಿಯೋದಲ್ಲಿ ಪ್ರಧಾನಿ ಮಾತನಾಡಿದ್ದಾರೆ.
"ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಕಡೆಗೆ ಓಗೊಟ್ಟ ಆ ವ್ಯಕ್ತಿಗಳನ್ನು ಮತ್ತು ಸಂಘಟನೆಗಳನ್ನು ನಾನು ಅಭಿನಂದಿಸುತ್ತೇನೆ ಅವರ ಅಮೂಲ್ಯವಾದ ಕೊಡುಗೆ ಸ್ವಚ್ಚ ಭಾರತ ಅಭಿಯಾನದ ಯಶಸ್ವಿಗೆ ಮಹತ್ವವಾದ ಕೊಡುಗೆ ನೀಡುತ್ತದೆ" ಎಂದು ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
2013 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನ.19 ರ ದಿನವನ್ನು ವಿಶ್ವ ಶೌಚಾಲಯ ದಿನ ಎಂದು ಘೊಷಿಸಿತ್ತು. ಇದರ ಮೂಲಕ ಜಾಗತಿಕ ನೈರ್ಮಲ್ಯ ಸಮಸ್ಯೆಯನ್ನು ನಿವಾರಿಸಲು ಆಯಾ ರಾಷ್ಟ್ರದ ಸರ್ಕಾರಗಳು, ಕೈಗೊಂದ ಕ್ರಮಗಳನ್ನು ಗುರುತಿಸುವ ಕೆಲಸವನ್ನು ವಿಶ್ವಸಂಸ್ಥೆ  ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com