ಮುಂಬೈ ನಲ್ಲಿ ಸೀಳು ತುಟಿ ಚಿಕಿತ್ಸೆ ಹಾಗೂ ಪ್ಯಾಲಟೆಸ್ ಚಿಕಿತ್ಸೆಗಾಗಿ ತಾವು ನೆರವು ನೀಡಿದ್ದ ಮಕ್ಕಳೊಂದಿಗೆ ಐಶ್ವರ್ಯ ರೈ ತಮ್ಮ ತಂದೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ.20 ರಂದು ಸ್ಮೈಲ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಫೋಟೊ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಐಶ್ವರ್ಯ ರೈ, ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮ ದಯವಿಟ್ಟು ನಿಲ್ಲಿಸಿ, ನಿಮಗೆ ಕೆಲಸ ಗೊತ್ತಿಲ್ಲ ಎಂದು ಹೇಳಿದ್ದಾರೆ.