ಪದ್ಮಾವತಿ ವಿವಾದ; ಸಿಬಿಎಫ್ ಸಿ ತನ್ನ ಕೆಲಸ ಮಾಡಲು ಬಿಡಿ: ಪ್ರಸಾರ ಸಚಿವಾಲಯ

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ'ಗೆ ದಿನದಿಂದ ದಿನಕ್ಕೆ ವಿರೋಧ....
ರಾಜವರ್ಧನ್ ಸಿಂಗ್ ರಾಥೋರ್
ರಾಜವರ್ಧನ್ ಸಿಂಗ್ ರಾಥೋರ್
ನವದೆಹಲಿ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ'ಗೆ ದಿನದಿಂದ ದಿನಕ್ಕೆ ವಿರೋಧ ಹೆಚ್ಚಾಗುತ್ತಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ತನ್ನ ಕೆಲಸ ಮಾಡಲು ಬಿಡಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಹೇಳಿದೆ.
ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಇಂದು ವರದಿಗಾರರಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ಸಿಂಗ್ ರಾಥೋರ್ ಅವರು, ಸಿಬಿಎಫ್ ಸಿ ಕೆಲವು ಜವಾಬ್ದಾರಿಗಳನ್ನು ನೀಡಲಾಗಿದೆ. ಅದು ಕೆಲಸ ಮಾಡಲು ಅವಕಾಶ ಕೊಡಿ ಎಂದಿದ್ದಾರೆ.
ಚಿತ್ರಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡುವ ಮೊದಲೆ ಪದ್ಮಾವತಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಮಧ್ಯ ಪ್ರದೇಶ ಸರ್ಕಾರ ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿದೆ.
ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ಮತ್ತು ಶಾಹೀದ್‌ ಕಪೂರ್‌ ಅಭಿನಯದ 'ಪದ್ಮಾವತಿ' ಚಿತ್ರ ರಜಪೂತರ ಕೆಂಗಣ್ಣಿಗೆ ಗುರಿಯಾಗಿದೆ. ಚಿತ್ರದಲ್ಲಿ ರಾಣಿ ಪದ್ಮಿನಿಯ ಇತಿಹಾಸವನ್ನು ತಿರುಚಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯ ರಂಗು ಪಡೆಯುತ್ತಿರುವ ಈ ಚಿತ್ರದ ವಿರುದ್ಧ ಪ್ರತಿಭಟನೆಗಳು ಶುರುವಾಗಿದ್ದು, ಪದ್ಮಾವತಿ ಬಿಡುಗಡೆ ದಿನಾಂಕವನ್ನೂ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com