ಸುಪ್ರೀಂ ಕೋರ್ಟ್, ಹೈಕೋರ್ಟ್ ನ್ಯಾಯಾಧೀಶರ ವೇತನ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅಸ್ತು

ಸುಪ್ರೀಂ ಕೋರ್ಟ್ ಹಾಗೂ ದೇಶದ 24 ಹೈಕೋರ್ಟ್ ಗಳ ನ್ಯಾಯಾಧೀಶರ ವೇತನ ಹೆಚ್ಚಳ ಪ್ರಸ್ತಾವನೆಗೆ ಬುಧವಾರ ಕೇಂದ್ರ ಸಚಿವ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ದೇಶದ 24 ಹೈಕೋರ್ಟ್ ಗಳ ನ್ಯಾಯಾಧೀಶರ ವೇತನ ಹೆಚ್ಚಳ ಪ್ರಸ್ತಾವನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ನ್ಯಾಯಾಧೀಶರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವುದಾಗಿ ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಈ ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಥಾಕೂರ್ ಅವರು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ವೇತನ ಹೆಚ್ಚಳ ಮಾಡುವಂತೆ 2016ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದೇ ಸಮಯದಲ್ಲಿ ರಚನೆಯಾಗಿದ್ದ ನ್ಯಾಯಾಧೀಶರ ಸಮಿತಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಿಗೆ 2.8 ಲಕ್ಷ ರೂ. ಹಾಗೂ ಹೈಕೋರ್ಟ್​ ನ್ಯಾಯಮೂರ್ತಿಗಳಿಗೆ 2.5 ಲಕ್ಷ ರೂ. ಮಾಸಿಕ ವೇತನಕ್ಕೆ ಶಿಫಾರಸು ಮಾಡಿತ್ತು, ಸುಪ್ರೀಂನಲ್ಲಿ 31 ಹಾಗೂ 24 ಹೈಕೋರ್ಟ್​ಗಳಲ್ಲಿ 1079 ನ್ಯಾಯಾಧೀಶರ ಸ್ಥಾನಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com