ಡೋಕ್ಲಾಂ ಬಿಕ್ಕಟ್ಟು ಬಳಿಕ ಚೀನಾ ಸೇರಿದಂತೆ ಗಡಿ ಉದ್ದಕ್ಕೂ ರಸ್ತೆ, ಮೂಲಸೌಕರ್ಯ ಹೆಚ್ಚಿಸಲು ಸೇನೆ ಕ್ರಮ!

73 ದಿನಗಳ ಡೋಕ್ಲಾಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ ಭಾರತದ ಗಡಿ ಉದ್ದಕ್ಕೂ ರಸ್ತೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಭಾರತೀಯ ಸೇನೆ...
ಭಾರತೀಯ ಸೇನೆ
ಭಾರತೀಯ ಸೇನೆ
ನವದೆಹಲಿ: 73 ದಿನಗಳ ಡೋಕ್ಲಾಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ ಭಾರತದ ಗಡಿ ಉದ್ದಕ್ಕೂ ರಸ್ತೆ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ. 
ಈ ಸಂಬಂಧ ತುರ್ತು ಪರಿಸ್ಥಿತಿಯಲ್ಲಿ ಸೇನೆಯನ್ನು ರವಾನಿಸಲು ಅವಶ್ಯಕವಾದ ರಸ್ತೆ ಮತ್ತು ಮೂಲಸೌಕರ್ಯ ಹೆಚ್ಚಿಸಲು ಕಾರ್ಪ್ಸ್ ಆಫ್ ಇಂಜಿನಿಯರ್ಸ್ ಗಳಿಗೆ ಆದೇಶ ನೀಡಿದೆ. ಈಗಾಗಲೇ ವಿವಿಧ ಹಂತಗಳಲ್ಲಿ ಬೆಟ್ಟಗಳನ್ನು ಕತ್ತರಿಸುವ ಯಂತ್ರಗಳು, ರಸ್ತೆ ಹಾಕುವ ಯಂತ್ರಗಳು ಮತ್ತು ಸಲಕರಣೆಗಳ ಸಂಗ್ರಹಿಸುವ ಕಾರ್ಯ ಭರದಿಂದ ಸಾಗಿದೆ. 
ಗಡಿಯಲ್ಲಿ ತ್ವರಿತವಾಗಿ ತೆರಳುವುದಕ್ಕಾಗಿ 50ಕ್ಕೂ ಹೆಚ್ಚು ಚಿಕ್ಕ ಸೇತುವೆಗಳು ಮತ್ತು ಸಾಕಷ್ಟು ಸಂಖ್ಯೆಯ ಆಕ್ರಮಣಕಾರಿ ಟ್ರ್ಯಾಕ್ಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಚೀನಾವು 4,000 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. 237 ವರ್ಷಗಳಷ್ಟು ಹಿಂದೆ 1780ರಲ್ಲಿ ಸ್ಥಾಪನೆಗೊಂಡಿದ್ದ ಸಿಒಇ ಯುದ್ಧರಂಗದಲ್ಲಿ ಇಂಜಿನಿಯರಿಂಗ್ ಬೆಂಬಲ ನೀಡುವುದರೊಡನೆ, ಯೋಧರು ಮತ್ತು ಫಿರಂಗಿ ದಳದ ತ್ವರಿತ ಚಲನವಲನಗಳಿಗಾಗಿ ಪ್ರಮುಖ ಗಡಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕವನ್ನು ನಿರ್ವಹಿಸುತ್ತಿದೆ. 
2005ರಲ್ಲಿ ಬಿಆರ್ಒಗೆ ಭಾರತ ಮತ್ತು ಚೀನಾ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ 73 ರಸ್ತೆಗಳನ್ನು ನಿರ್ಮಿಸುವಂತೆ ಸೂಚಿಸಲಾಗಿತ್ತು. ಆದರೆ ಯೋಜನೆಯ ಅನುಷ್ಠಾನದಲ್ಲಿ ಭಾರೀ ವಿಳಂಬವಾಗಿದ್ದು ಇದು ಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com