ಆರು ಗಜದ ಸೀರೆಯಲ್ಲಿ ರಾಮಾಯಣ ಸಂಚಿಕೆ ಚಿತ್ರಿಸಿದ ನೇಕಾರನಿಗೆ ಗೌರವ ಡಾಕ್ಟರೇಟ್!

ಸಂಕೀರ್ಣ ಕಲಾಕೃತಿ ಮೂಲಕ ಆರು ಗಜದ ಸೀರೆಯಲ್ಲಿ ರಾಮಾಯಣದ ಏಳು ಸಂಚಿಕೆಗಳನ್ನು ಚಿತ್ರಿಸಿದ ...
ಬೈರೆನ್ ಕುಮಾರ್ ಬಾಸಕ್
ಬೈರೆನ್ ಕುಮಾರ್ ಬಾಸಕ್
ಕೃಷ್ಣನಗರ್: ಸಂಕೀರ್ಣ ಕಲಾಕೃತಿ ಮೂಲಕ ಆರು ಗಜದ ಸೀರೆಯಲ್ಲಿ ರಾಮಾಯಣದ ಏಳು ಸಂಚಿಕೆಗಳನ್ನು ಚಿತ್ರಿಸಿದ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಬೈರೆನ್ ಕುಮಾರ್ ಬಾಸಕ್ ಇಂಗ್ಲೆಂಡ್ ಮೂಲದ ವಿಶ್ವವಿದ್ಯಾಲಯದಿಂದ ಎರಡು ದಶಕಗಳ ನಂತರ ಗೌರವ ಡಾಕ್ಟರೇಟ್ ಗಳಿಸಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಫುಲಿಯಾ ಎಂಬ ಊರಿನ ಕೈಮಗ್ಗ ನೇಕಾರ ಬಾಸಕ್ ಅವರಿಗೆ ಇಂಗ್ಲೆಂಡ್ ನ ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವಿಶ್ವದಾದ್ಯಂತ ದಾಖಲೆ ಪುಸ್ತಕಗಳ ಸಂಯೋಜನೆಯಿಂದ ರೂಪುಗೊಂಡ ಸ್ವಾಯತ್ತ ಸಂಸ್ಥೆ ಈ ವಿಶ್ವವಿದ್ಯಾಲಯ.
 ದೆಹಲಿಯಲ್ಲಿ ಕಳೆದ ವಾರ ನಡೆದ ಸಮಾರಂಭದಲ್ಲಿ ಬೈರೆನ್ ಕುಮಾರ್ ಬಾಸಕ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಆರು ಗಜದ ಸೀರೆಯಲ್ಲಿ ರಾಮಾಯಣದ ಸಂಚಿಕೆಗಳನ್ನು ಬಿಡಿಸಲು ಅವರು ಒಂದು ವರ್ಷ ಆಲೋಚನೆ ಮಾಡಿ ನೇಯ್ಗೆಗೆ ಎರಡು ವರ್ಷಗಳನ್ನು ತೆಗೆದುಕೊಂಡು 1996ರಲ್ಲಿ ಮುಗಿಸಿದರು.
ಆರು ಗಜದ ಅವರ ನೇಯ್ಗೆಯ ಸೀರೆಗೆ ರಾಷ್ಟ್ರೀಯ ಪುರಸ್ಕಾರ, ರಾಷ್ಟ್ರೀಯ ಮೆರಿಟ್ ಸರ್ಟಿಫಿಕೇಟ್ , ಸಂತ ಕಬೀರ ಪ್ರಶಸ್ತಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ವಿಶ್ವ ಅದ್ವಿತೀಯ ದಾಖಲೆ ಪ್ರಶಸ್ತಿಗಳು ಸಿಕ್ಕಿವೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ 2015ರಲ್ಲಿ ತಮ್ಮ ತಂದೆಯವರ ದಾಖಲೆ ನೋಡಿದ ಇಂಗ್ಲೆಂಡಿನ ವಿಶ್ವವಿದ್ಯಾಲಯ ತಮ್ಮ ಕೆಲಸದ ಮೇಲೆ ಪ್ರಬಂಧ ಬರೆದುಕೊಡುವಂತೆ ಹೇಳಿದರು ಎನ್ನುತ್ತಾರೆ ಬೈರನ್ ಅವರ ಮಗ ಫುಲಿಯಾ ಶಾಲೆಯ ಶಿಕ್ಷಕ ಆನಂದ ಮೋದಕ್. ಇವರು ತಮ್ಮ ತಂದೆ ಬರೆದ ಪ್ರಬಂಧವನ್ನು ಇಂಗ್ಲಿಷಿಗೆ ಬರೆದುಕೊಟ್ಟರು.
20 ವರ್ಷಗಳ ಹಿಂದೆ ಮಾಡಿದ ಸೀರೆಯ ಕುಸುರಿ ಇಂದು ಹೊಳಪು ಕಳೆದುಕೊಳ್ಳುತ್ತಿದೆ. ಆದರೂ ಅದನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರಂತೆ. ಪಶ್ಚಿಮ ಬಂಗಾಳದ ಫುಲಿಯಾ ಊರು ಸೀರೆ ನೇಯ್ಗೆಗೆ ಹೆಸರುವಾಸಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com