ಸಹಾರಾ-ಆ್ಯಂಬಿ ವ್ಯಾಲಿ ಹರಾಜನ್ನು ಮುಂದುವರೆಸಿ: ಬಾಂಬೈ ಹೈಕೋರ್ಟ್‌ಗೆ ಸುಪ್ರೀಂ

ಸಹಾರಾ ಸಮೂಹದ ಐಷಾರಾಮಿ ರೆಸಾರ್ಟ್ ಟೌನ್ ಶಿಪ್ ಹರಾಜನ್ನು ಮುಂದುವರೆಸಿ ಎಂದು ಸುಪ್ರೀಂಕೋರ್ಟ್ ಬಾಂಬೈ ಹೈಕೋರ್ಟ್ ಗೆ ಹಸಿರು ನಿಶಾನೆ...
ಆ್ಯಂಬಿ ವ್ಯಾಲಿ
ಆ್ಯಂಬಿ ವ್ಯಾಲಿ
ನವದೆಹಲಿ: ಸಹಾರಾ ಸಮೂಹದ ಐಷಾರಾಮಿ  ರೆಸಾರ್ಟ್ ಟೌನ್ ಶಿಪ್ ಹರಾಜನ್ನು ಮುಂದುವರೆಸಿ ಎಂದು ಸುಪ್ರೀಂಕೋರ್ಟ್ ಬಾಂಬೈ ಹೈಕೋರ್ಟ್ ಗೆ ಹಸಿರು ನಿಶಾನೆ ತೋರಿದೆ. 
ಪುಣೆಯಲ್ಲಿರುವ ಐಷಾರಾಮಿ ಆ್ಯಂಬಿ ವ್ಯಾಲಿ ರೆಸಾರ್ಟ್ ಹರಾಜು ಪ್ರಕ್ರಿಯೆ ಮುಗಿಯುವ ತನಕ ಆರೈಕೆಗಾಗಿ ಬಾಂಬೆ ಹೈಕೋರ್ಟ್ ನ ಅಧಿಕೃತ ರಿಸೀವರ್ಸ್ ಅನ್ನು ಉನ್ನತ ನ್ಯಾಯಾಲಯವು ನೇಮಿಸಿದೆ.
ಹರಾಜು ಪ್ರಕ್ರಿಯೆಗೆ ಸಹಾರಾ ಸಮೂಹವು ಹಲವು ಅಡೆತಡೆಗಳನ್ನು ರಚಿಸುತ್ತಿದೆ ಎಂದು ಬಾಂಬೈ ಹೈಕೋರ್ಟ್ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು. ಡಿಸೆಂಬರ್ 1ರಂದು ಹರಾಜು ಪ್ರಕ್ರಿಯೆ ಪ್ರಾರಂಭವಾಗಲಿದ್ದು ನಂತರ 8 ವಾರಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ. 
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಹರಾಜು ಕೈಗೊಳ್ಳಲಾಗಿದ್ದು 37,392 ಕೋಟಿ ರು. ಮೌಲ್ಯ ನಿಗದಿಪಡಿಸಲಾಗಿದೆ. ವಿಲ್ಲಾಗಳು, ಗಾಲ್ಫ್ ಕೋರ್ಸ್, ಆಸ್ಪತ್ರೆ, ಶಾಲೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳ ಆ್ಯಂಬಿ ವ್ಯಾಲಿಯಲ್ಲಿ ಲಭ್ಯವಿರಲಿದೆ. ಪುಣೆ ಜಿಲ್ಲೆಯ ಲೋನವಾಲಾದಲ್ಲಿ ಸುಮಾರು 6,761.6 ಎಕರೆ ಪ್ರದೇಶದಲ್ಲಿ ಆ್ಯಂಬಿ ವ್ಯಾಲಿ ಟೌನ್ ಶಿಪ್ ನಿರ್ಮಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com