2016ರ ನವೆಂಬರ್ ನಲ್ಲಿ ತಿರುಪ್ಪರಾಂಗುಂದ್ರಮ್ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಎಕೆ ಬೋಸ್ ಅವರ ಆಯ್ಕೆಯನ್ನು ಪ್ರಶ್ನಿಸಿ ಡಾ.ಸರವಣನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವೇಲುಮುರಗನ್ ಅವರು, ಡಿಸೆಂಬರ್ 8ರೊಳಗೆ ಜಯಲಲಿತಾ ಅವರ ಮೂಲ ಬೆರಳಚ್ಚು ಒದಗಿಸುವಂತೆ ಬೆಂಗಳೂರು ಜೈಲಿಗೆ ಹಾಗೂ ಆಧಾರ್ ಪ್ರಾದೇಶಿಕ ಕಚೇರಿಗೆ ಸೂಚಿಸಿದ್ದಾರೆ.