ಸೊಹ್ರಾಬುದ್ದೀನ್ ಎನ್ ಕೌಂಟರ್: ನ್ಯಾಯಮೂರ್ತಿಗಳ ಅನುಮಾನಾಸ್ಪದ ಸಾವಿನ ತನಿಖೆಯಾಗಲಿ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಬ್ರಿಜ್ಗೋಪಾಲ್ ಹರಿಕೃಶನ್ ಲೋಯಾ ಅವರ ಸಾವಿನ ಬಗ್ಗೆ ........
ಎಪಿ ಶಾ
ಎಪಿ ಶಾ
ನವದೆಹಲಿ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಬ್ರಿಜ್ಗೋಪಾಲ್ ಹರಿಕೃಶನ್ ಲೋಯಾ ಅವರ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ಹೇಳಿದ್ದಾರೆ. ಎನ್ ಡಿ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದು  "ಅವನ ಸಾವಿನ ಕುರಿತು ಕೆಲವು ಅನುಮಾನಗಳಿವೆ ಎಂದು ಅವರ ಕುಟುಂಬ ಬಹಳ ಬಲವಾಗಿ ಹೇಳುತ್ತಿದೆ" ಎಂದಿದ್ದಾರೆ.
ಅವರ ಉಡುಪುಗಳ ಮೇಲೆ ರಕ್ತವಿತ್ತು ಎಂದು ಹೇಳಲಾಗಿರುವುದಲ್ಲದೆ ಮರಣೋತ್ತರ ಪರೀಕ್ಷಾ ವರದಿಗೆ ಯಾರೋ ವ್ಯಕ್ತಿ ಸಹಿ ಮಾಡಿದ್ದಾರೆ. ಹೀಗಾಗಿ ಅವರ ಕುಟುಂಬ ಅವರು ಹೃದಯಾಘಾತವಾಗಿ ಸತ್ತರು ಎನ್ನುವುದನ್ನು ನಂಬುತ್ತಿಲ್ಲ. "ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಯು ಸ್ವತಃ ಈ ಪ್ರಕರಣದ ಕುರಿತು ಗಮನ ಹರಿಸಿ ನೋಡಬೇಕು ಮತ್ತು ವಿಚಾರಣೆಗೆ ಆದೇಶ ಮಾಡಬೇಕೆ ಎನ್ನುವುದನ್ನು ನಿರ್ಧರಿಸಬೇಕು.  ಈ ಆರೋಪಗಳನ್ನು ತನಿಖೆ ಮಾಡದಿದ್ದರೆ ಅದರಿಂದ ನ್ಯಾಯಾಂಗಕ್ಕೆ ಗಂಭೀರ ಕಳಂಕ ತಗಲುತ್ತದೆ" ಎಂದು ಶಾ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ  ನ್ಯಾಯಾಂಗದ ಸಮಗ್ರತೆಯ ಕುರಿತಂತೆ ಜನರ ವಿಶ್ವಾಸವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು  ಅವರು ಒತ್ತಿ ಹೇಳಿದರು.
ಪ್ರಸಿದ್ದ ವಾರ್ತಾ ನಿಯತಕಾಲಿಕೆ ಕ್ಯಾರವಾನ್ ವರದಿಯನ್ನು ಉದಾಹರಿಸಿ ಮಾತನಾಡಿದ ನ್ಯಾಯಮೂರ್ತಿ ಶಾ,  ನ್ಯಾಯಮೂರ್ತಿ ಬಿ.ಎಚ್.ಲೋಯಾ ಅವರ ಕುಟುಂಬವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ, ಇದಕ್ಕಾಗಿ ಅವರ ಸಾವಿಗೆ ಏನು ಕಾರಣ ಎನ್ನುವುದು ತನಿಖೆಯಾಗಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com