ಶೋಪಿಯಾನ್ ನಲ್ಲಿ ಯೋಧನ ಹತ್ಯೆ: ಹೀನ ಕೃತ್ಯ ಖಂಡಿಸಿದ ಜಮ್ಮು-ಕಾಶ್ಮೀರ ಸಿಎಂ

ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಯೋಧ ಇರ್ಫಾನ್ ದರ್ ನ್ನು ಹತ್ಯೆ ಮಾಡಲಾಗಿದೆ. ಯೋಧನ ಹತ್ಯೆಯನ್ನು ಜಮ್ಮು-ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.
ಯೋಧನ ಹತ್ಯೆ
ಯೋಧನ ಹತ್ಯೆ
ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ನಲ್ಲಿ ಯೋಧ ಇರ್ಫಾನ್ ದರ್ ನ್ನು ಹತ್ಯೆ ಮಾಡಲಾಗಿದೆ. ಯೋಧನ ಹತ್ಯೆಯನ್ನು ಜಮ್ಮು-ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ. 
ರಜೆಯ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಯೋಧ ಇರ್ಫಾನ್ ಅವರ ಮೃತದೇಹ ಗುಂಡಿನ ಗಾಯಗಳೊಂದಿಗೆ ಪತ್ತೆಯಾಗಿದ್ದು, ಭಯೋತ್ಪಾದಕರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. 23 ವರ್ಷದ ಇರ್ಫಾನ್ ಲೈನ್ ಆಫ್ ಕಂಟ್ರೋಲ್ ಬಳಿ ಇರುವ ಗುರೆಜ್ ನ ಇಂಜಿನಿಯರಿಂಗ್ ರೆಜ್ಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 
ನ.24 ರಂದು ಸಂಜೆ ಕಾರಿನಲ್ಲಿ ತೆರಳಿದ್ದ ಇರ್ಫಾನ್ ಅಹ್ಮದ್ ದರ್ ಅವರ ಮೃತದೇಹ ನ.25 ರಂದು ಬೆಳಿಗ್ಗೆ ಪತ್ತೆಯಾಗಿದ್ದು, ದೇಹದೊಳಗೆ ಗುಂಡು ಹೊಕ್ಕಿವೆ, ದರ್ ಅವರ ವಾಹನ ಒಂದು ಕಿ.ಮೀ ದೂರದಲ್ಲಿ ಪತ್ತೆಯಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಯೋಧ ಹತ್ಯೆಯಾಗಿರುವುದರ ಬಗ್ಗೆ ಟ್ವೀಟ್ ಮಾಡಿರುವ ಜಮ್ಮು-ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ, ಯೋಧನ ಹತ್ಯೆ ಹೀನ ಕೃತ್ಯವಾಗಿದೆ, ಆದರೆ ಈ ರೀತಿಯ ಕೃತ್ಯಗಳಿಂದ ಕಾಶ್ಮೀರದಲ್ಲಿ ಶಾಂತಿ ಕದಡಲು ಸಾಧ್ಯವಿಲ್ಲ ಹಾಗೂ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸುವ ನಮ್ಮ ದೃಢ ನಿರ್ಧಾರವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com