ಬಿಜೆಪಿ, ಆರ್ ಎಸ್ ಎಸ್ ಗಳು ಭಾರತವನ್ನು ದೇವತಾವಾದಿ ರಾಷ್ಟ್ರವಾಗಿಸಲು ಹೊರಟಿವೆ: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಬಿಜೆಪಿ ಮತ್ತು ಅದರ ಅಂಗಪಕ್ಷಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತಿಯಾದ ಚಟುವಟಿಕೆಯನ್ನು ವಿರೋಧಿಸುವಂತೆ ರಾಜ್ಯದ ಜನತೆಗೆ ಕರೆ ನಿಡಿದ್ದಾರೆ.
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್
Updated on
ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಮಾಣಿಕ್  ಸರ್ಕಾರ್ ಬಿಜೆಪಿ ಮತ್ತು ಅದರ ಅಂಗಪಕ್ಷಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತಿಯಾದ ಚಟುವಟಿಕೆಯನ್ನು ವಿರೋಧಿಸುವಂತೆ ರಾಜ್ಯದ ಜನತೆಗೆ ಕರೆ ನಿಡಿದ್ದಾರೆ. 
"ಅವರು ಭಾರತವನ್ನು ದೇವತಾವಾದಿ ರಾಷ್ಟ್ರವಾಗಿ ಪರಿವರ್ತಿಸುವುದಕ್ಕೆ ಹೊರಟಿದ್ದಾರೆ. ಯಾರೊಡನೆ ಸ್ನೇಹ ಬೆಳೆಸಬೇಕು, ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎನ್ನುವುದನ್ನು ಅವರು ಆದೇಶಿಸಲಿದ್ದಾರೆ೩. ಗೋ ರಕ್ಷಕರ ಹೆಸರಿನಲ್ಲಿ ಅವರು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ." ವಿವೇಕಾನಂದ ಮೈದಾನದಲ್ಲಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ (ಸಿಐಟಿಯು) ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಇವರೆಲ್ಲರೂ ಸೇರಿ ತ್ರಿಪುರದಲ್ಲಿರುವ ಎಡಪಕ್ಷದ ಸರ್ಕಾರವನ್ನು ಉರುಳಿಸಲು ತಂತ್ರ ಹೂಡಿದ್ದಾರೆ ಎಂದು ಅವರು ಹೇಳಿದರು 1998 ರಿಂದಲೂ ತ್ರಿಪುರಾದ ಮುಖ್ಯಮಂತ್ರಿಯಾಗಿರುವ ಸರ್ಕಾರ್, ರಾಜ್ಯದಲ್ಲಿ ಎಂಟನೇ ಬಾರಿಗೆ ಎಡಪಕ್ಷದ ಸರಕಾರ ರಚನೆಯಲ್ಲಿ ತಾವೆಲ್ಲಾ ಪ್ರಮುಖ ಪಾತ್ರ ವಹಿಸಬೇಕೆಂದು ಸಮಾವೇಶದಲ್ಲಿ ಪಾಲ್ಗೊಳ್ಳುವವರನ್ನು ಆಗ್ರಹಿಸಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com