ಆಮ್ ಆದ್ಮಿ ಪಕ್ಷಕ್ಕೆ 30 ಕೋಟಿ ರು. ತೆರಿಗೆ ನೋಟಿಸ್ ನೀಡಿದ ಐಟಿ

ಆದಾಯ ತೆರಿಗೆ ಇಲಾಖೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಶಾಕ್ ನೀಡಿದ್ದು, 30.67 ಕೋಟಿ ರುಪಾಯಿ ತೆರಿಗೆ ಕಟ್ಟುವಂತೆ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ಆದಾಯ ತೆರಿಗೆ ಇಲಾಖೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಶಾಕ್ ನೀಡಿದ್ದು, 30.67 ಕೋಟಿ ರುಪಾಯಿ ತೆರಿಗೆ ಕಟ್ಟುವಂತೆ ಎಎಪಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಎಲ್ಲಾ ತೆರಿಗೆ ದಾಖಲೆಗಳನ್ನು ಪರಿಸಿಲಿದ ಬಳಿಕ 30.67 ಕೋಟಿ ರುಪಾಯಿ ತೆರಿಗೆ ನೋಟಿಸ್ ನೀಡಲಾಗಿದೆ ಎಂದು ಹೆಸರು ಹೇಳಲ್ಲಿಚ್ಚಿಸದ ಐಟಿ ಅಧಿಕಾರಿಯೊಬ್ಬರು  ಹೇಳಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ.
ಆಮ್ ಆದ್ಮಿ ಪಕ್ಷ 13.16 ಕೋಟಿ ರುಪಾಯಿ ಆದಾಯವನ್ನು ಘೋಷಿಸಿಕೊಂಡಿರಲಿಲ್ಲ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
2014-15 ಮತ್ತು 2015-16ನೇ ಸಾಲಿನ ಹಣಕಾಸು ವರ್ಷದಲ್ಲಿ ಆಮ್ ಆದ್ಮಿ ಪಕ್ಷದ ಒಟ್ಟು ತೆರಿಗೆ ಸಹಿತ ಆದಾಯ 68.44 ಕೋಟಿ ರುಪಾಯಿ ಆಗಿದ್ದು, ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸಿದ ದೇಣಿಗೆ ಹಣವನ್ನು ಅಕೌಂಟ್ ಪುಸ್ತಕದಲ್ಲಿ ಬರೆದಿರಲಿಲ್ಲ ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com