ಪಶ್ಚಿಮ ಬಂಗಾಳ: ಕಸದ ರಾಶಿಯಲ್ಲಿ 200 ಕ್ಕೂ ಹೆಚ್ಚಿನ ಸಂಖ್ಯೆಯ ಮತದಾರರ ಗುರುತಿನ ಚೀಟಿ ಪತ್ತೆ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿನ ಕಸ ವಿಲೇವಾರಿ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಸಂಖ್ಯೆಯ ಮತದಾರರ ಗುರುತಿನ ಚೀಟಿಗಳು ಇಂದು ಪತ್ತೆಯಾಗಿದೆ .
ಸಾಂದರ್ಭಿಕ ಚಿತ್ರೆ
ಸಾಂದರ್ಭಿಕ ಚಿತ್ರೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿನ ಕಸ ವಿಲೇವಾರಿ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಸಂಖ್ಯೆಯ ಮತದಾರರ ಗುರುತಿನ ಚೀಟಿಗಳು ಇಂದು ಪತ್ತೆಯಾಗಿದೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ. ನಾಡಿಯಾ ಜಿಲ್ಲೆಯ ಉತ್ತರಾಪುರದ ಪುರಸಭೆಯಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಾಗ ಪಾಲಿಥಿನ್ ಚೀಲದಲ್ಲಿದ್ದ ಗುರುತಿನ ಚೀಟಿಗಳು ಸಿಕ್ಕಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
"ಪ್ರಾಥಮಿಕ ತಪಾಸಣೆಯ ವೇಳೆ , ಇವೆಲ್ಲವೂ ಅಸಲಿ ಗುರುತಿನ ಚೀಟಿಗಳೆಂದು ಕಂಡುಬಂದಿದೆ" ಎಂದು ಉತ್ತರಾಪುರ-ಕೋಟ್ರಂಗ್ ಪುರಸಭೆಯ ಅಧ್ಯಕ್ಷ ದಿಲೀಪ್ ಯಾದವ್ ತಿಳಿಸಿದ್ದಾರೆ.
"ನಾವು ಪರಿಶೀಲಿಸಿದ ಕೆಲವು ಗುರುತಿನ ಚೀಟಿಗಳಲ್ಲಿ ಇದೇ ಜಿಲ್ಲೆಯ ಹಿಂದ್ಮೋತರ್ ಮತ್ತು ಕೊನಾಗರ್ ಮುಂತಾದ ಪಟ್ಟಣಗಳ ವಿಳಾಸಗಳಿವೆ.  ಆದರೆ ಈ ಗುರುತಿನ ಚೀಟಿಗಳನ್ನು ಅವರು ಏಕೆ ಎಸೆದಿದ್ದಾರೆ, ಅವುಗಳು ಹೇಗೆ ಕಸದ ಪಾಲಾಗಿದೆ ಎನ್ನುವುದು ತಿಳಿದಿಲ್ಲ. ಇದೀಗ ಅವುಗಳನ್ನು ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೋಲೀಸರಿಗೆ ಒಪ್ಪಿಸಲಾಗಿದೆ" ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com