ಹೈದರಾಬಾದ್: ಭಾರತಕ್ಕೆ ಮಹಿಳಾ ಸಬಲೀಕರಣದಲ್ಲಿ ನಂಬಿಕೆ ಇದ್ದು, ಜಾಗತಿಕ ಉದ್ಯಮಶೀಲತಾ ಸಮಾವೇಶದ ಮೂಲಕ ಮಹಿಳೆಯರ ಶಕ್ತಿ ಅನಾವರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಹಿಳಾ ಸಾಧಕೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಮುತ್ತಿನ ನಗರಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಮುದ್ರಾ ಯೋಜನೆಯಿಂದ ಮಹಿಳೆ ಉದ್ಯಮಿಗಳಿಗೆ ಸಹಾಯವಾಗಿದೆ. ಕಳೆದ 10 ವರ್ಷಗಳ ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದರು.
ಭಾರತ ಹೂಡಿಕೆ ಸ್ನೇಹಿಯಾಗಿದ್ದು, ಉದ್ಯಮ ನಡೆಸಲು ತುಂಬಾ ಸುಲಭವಾಗಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಪ್ರಧಾನಿ ಮೋದಿ ಅವರು ಉದ್ಯಮಿಗಳಿಗೆ ಮನವಿ ಮಾಡಿದರು.
ದೇಶದ 1.15 ಬಿಲಿಯನ್ ಜನರಿಗೆ ಆಧಾರ್ ಕಾರ್ಡ್ ನೀಡಿದ್ದೇವೆ. ನಿತ್ಯ 40 ಮಿಲಿಯನ್ ಡಿಜಿಟಲ್ ವಹಿವಾಟು ನಡೆಯುತ್ತಿದೆ. ಭೀಮ್ ಹ್ಯಾಪ್ ಮೂಲಕ ನಿತ್ಯ 280,000 ವಹಿವಾಟುಗಳು ನಡೆಯುತ್ತಿವೆ ಎಂದು ಪ್ರಧಾನಿ ತಿಳಿಸಿದರು.