ಸರ್ಕಾರಿ ಹಾಸ್ಟೆಲ್‌ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ರಾಜಸ್ತಾನ ಸರ್ಕಾರ

ಸರ್ಕಾರಿ ಹಾಸ್ಟೆಲ್ಸ್ ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ...
ರಾಷ್ಟ್ರಗೀತೆ
ರಾಷ್ಟ್ರಗೀತೆ
ಜೈಪುರ್: ಸರ್ಕಾರಿ ಹಾಸ್ಟೆಲ್ಸ್ ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. 
ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ತುಂಬುವ ಸಲುವಾಗಿ ಸರ್ಕಾರಿ ಹಾಸ್ಟೆಲ್ಸ್ ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅರುಣ್ ಚತುರ್ವೇಧಿ ತಿಳಿಸಿದ್ದಾರೆ. 
ಬೆಳಗ್ಗೆ 7 ಗಂಟೆ ಸುಮಾರಿಗೆ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ಜನ ಗಣ ಮನ ರಾಷ್ಟ್ರಗೀತೆಯನ್ನು ಹಾಡಲಿದ್ದು ಈ ವೇಳೆ ಹಾಸ್ಟೆಲ್ ನ ವಾರ್ಡನ್ ಸಹ ಉಪಸ್ಥಿತರಿರಲಿದ್ದಾರೆ. ಈ ಆದೇಶ ಸಂವಿಧಾನ ದಿನ ನವೆಂಬರ್ 26ರಿಂದು ಜಾರಿಗೆ ಬಂದಿದೆ. 
ರಾಜಸ್ಥಾನದಲ್ಲಿ ಸುಮಾರು 800 ಸರ್ಕಾರಿ ಹಾಸ್ಟೆಲ್ ಗಳಿಂದ ಅದರಲ್ಲಿ 40 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಅವರೆಲ್ಲಾ ಬೆಳಗ್ಗೆ 7 ಗಂಟೆ ಸಮಯದಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com