ಆದರೆ ಇದನ್ನು ನಿರಾಕರಿಸಿರುವ ಮುಖ್ಯಮಂತ್ರಿ ರಮಣ್ ಸಿಂಗ್, ಕಾರುಗಳ ನಂಬರ್ ಪ್ಲೇಟುಗಳನ್ನು ಆರ್ ಟಿಒ ಕಚೇರಿಗಳು ನಿರ್ಧರಿಸುತ್ತವೆಯೇ ಹೊರತು ನಾವಲ್ಲ. ನಮಗೆ ಸಿಕ್ಕಿರುವ ಸಂಖ್ಯೆಗಳೆಲ್ಲವು ಅದೃಷ್ಟದ ಸಂಖ್ಯೆಗಳಾಗಿವೆಯೇ ವಿನಃ ಇದರಲ್ಲಿ ಮ್ಯಾಜಿಕ್, ಮೂಢನಂಬಿಕೆಯೇನು ಇಲ್ಲ. ನಾನು ನನ್ನ ಜೀವನದಲ್ಲಿ ಮೂಢಾಚಾರಗಳನ್ನು ನಂಬುವುದಿಲ್ಲ ಎಂದರು.