ಸೋಮನಾಥ್‌ ದೇವಾಲಯಕ್ಕೆ ಭೇಟಿ: ಹಿಂದೂಯೇತರ ಕಾಲಮ್ ನಲ್ಲಿ ರಾಹುಲ್ ಹೆಸರು, ವಿವಾದ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ಸೌರಾಷ್ಟ್ರದಲ್ಲಿರುವ ಸೋಮನಾಥ್‌....
ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
ಸೋಮನಾಥ್ ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗುಜರಾತ್ ಸೌರಾಷ್ಟ್ರದಲ್ಲಿರುವ ಸೋಮನಾಥ್‌ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ದೇವಾಲಯದಲ್ಲಿ ಪುಸ್ತಕದಲ್ಲಿ ಹಿಂದೂಯೇತರ ಎಂಬ ಕಾಲಮ್‌ನಲ್ಲಿ ರಾಹುಲ್‌ ಹೆಸರು ನಮೂದಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುಜರಾತ್‌ ಕಾಂಗ್ರೆಸ್‌ ನ ಮಾಧ್ಯಮ ಸಮನ್ವಯಕಾರ ಮಾಡಿದ ಎಡವಟ್ಟಿನಿಂದಾಗಿ ರಾಹುಲ್‌ ಗಾಂಧಿ ಈಗ ಮುಜುಗರಕ್ಕೆ ಸಿಲುಕಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. 
ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸಿರುವ ರಾಹುಲ್‌ ಗಾಂಧಿ ಅವರು ಇಂದು ಸೋಮನಾಥ್‌ ದೇಗುಲಕ್ಕೆ ಭೇಟಿ ನೀಡಿದರು. ರಾಹುಲ್‌ ಜತೆ ಅಹಮದ್‌ ಪಟೇಲ್‌ ಕೂಡ ಇದ್ದರು. ಈ ಸಂದರ್ಭದಲ್ಲಿ ದೇವಾಲಯದ ಭೇಟಿ ನೀಡುವವರ ಹಾಜರಿ ಪುಸ್ತಕದಲ್ಲಿ ಇಬ್ಬರ ಹೆಸರನ್ನೂ ಮಾಧ್ಯಮ ಸಮನ್ವಯಕಾರ ಮನೋಜ್‌ ತ್ಯಾಗಿ ನಮೂದಿಸಿದರು.
ಈ ಸಂದರ್ಭದಲ್ಲಿ ಅಹಮದ್‌ ಪಟೇಲ್‌ ಹೆಸರನ್ನು ಹಿಂದೂಯೇತರರ ಪಟ್ಟಿಯಲ್ಲಿ ನಮೂದಿಸಿಸಲಾಗಿತ್ತು. ಹಾಗೆಯೇ ರಾಹುಲ್‌ ಗಾಂಧಿ ಹೆಸರನ್ನು ದಾಖಲಿಸಲಾಗಿದೆ.
ಸೋಮನಾಥ್‌ ದೇಗುಲದೊಳಗೆ ಹಿಂದೂಯೇತರರು ಪ್ರವೇಶಿಸುವುದಕ್ಕೆ ನಿಷೇಧವಿದೆ. ಪೂರ್ವ ಅನುಮತಿ ಪಡೆದು ನಂತರ ದೇಗುಲ ಪ್ರವೇಶಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com