ಪದ್ಮಾವತಿ ವಿವಾದಕ್ಕೆ ವದಂತಿಗಳು ಕಾರಣ; ಸತ್ಯಾಂಶ ತಿರುಚಿಲ್ಲ: ಸಂಸತ್ ಸಮಿತಿಗೆ ಭನ್ಸಾಲಿ ಹೇಳಿಕೆ

"ಪದ್ಮಾವತಿ" ಚಿತ್ರದ ಕುರಿತ ತೀವ್ರ ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಸಂಸತ್ ಸಮಿತಿಯ ಮುಂದೆ ಹಾಜರಾದರು.
ಸಂಜಯ್ ಲೀಲಾ ಭನ್ಸಾಲಿ
ಸಂಜಯ್ ಲೀಲಾ ಭನ್ಸಾಲಿ
Updated on
ನವದೆಹಲಿ: "ಪದ್ಮಾವತಿ" ಚಿತ್ರದ ಕುರಿತ ತೀವ್ರ ವಿವಾದದ ಹಿನ್ನೆಲೆಯಲ್ಲಿ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಸಂಸತ್ ಸಮಿತಿಯ ಮುಂದೆ ಹಾಜರಾದರು. ಈ ವೇಳೆ 16 ನೇ ಶತಮಾನದ ರಜಪೂತ ರಾಣಿಯ ಬಗ್ಗೆ ಐತಿಹಾಸಿಕ ಸತ್ಯಗಳನ್ನು ವಿರೂಪಗೊಳಿಸಲಾಗಿದೆ ಎನ್ನುವುದನ್ನು ನಿರಾಕರಿಸಿದ ಅವರು . ಚಿತ್ರ ವಿವಾದಕ್ಕೆ ಈಡಾಗಲು ವದಂತಿಗಳು ಕಾರಣ ಎಂದಿದ್ದಾರೆ.
ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂದಳಿ (ಸಿಬಿ ಎಫ್ ಸಿ) ಮುಖ್ಯಸ್ಥ ಪ್ರಸೂನ್ ಜೋಷಿ  ನೇತೃತ್ವದಲ್ಲಿ  ಸಂಸತ್ ಭವನದಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಸದಸ್ಯರ ಜತೆಗೆ ಎರಡು ಗಂಟೆಗಳ ಕಾಲ ಭನ್ಸಾಲಿ ಸಂವಾದ ನಡೆಸಿದ್ದಾರೆ. ಅವರು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವ ಮುನ್ನವೇ ಕೆಲವು ಆಯ್ದ ಪತ್ರಕರ್ತರಿಗೆ ಚಲನಚಿತ್ರವನ್ನು ಪ್ರದರ್ಶಿಸಿದ್ದೇಕೆ ಎಂದು ಬನ್ಸಾಲಿ ಅವರನ್ನು ಸಂಸದೀಯ ಸದಸ್ಯರು ಪ್ರಶ್ನಿಸಿದ್ದಾರೆ. 
"ಚಿತ್ರದ ಎಲ್ಲ ವಿವಾದಗಳು ವದಂತಿಗಳನ್ನು ಆಧರಿಸಿದೆ. ನಾನು ಸತ್ಯಗಳನ್ನು ವಿರೂಪಗೊಳಿಸಲಿಲ್ಲ. ಚಿತ್ರವು ಮಲಿಕ್ ಮುಹಮ್ಮದ್ ಜೈಸಿ ಅವರ ಕವನವನ್ನು ಆಧರಿಸಿದೆ". 16 ನೇ ಶತಮಾನದ ಭಾರತೀಯ ಸೂಫಿ ಕವಿ ಯ ಐತಿಹಾಸಿಕ ಕವಿತೆ "ಪದ್ಮಾವತ್".ನ್ನು ಉಲ್ಲೇಖಿಸಿ ಭನ್ಸಾಲಿ ಮಾತನಾಡಿದರು. ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶ ನಾವು ಹೊಂದಿಲ್ಲನ್ ಎಂದ ಭನ್ಸಾಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ 30 ಸದಸ್ಯರ ಸಮಿತಿ ಎದುರು ತಮ್ಮ ನಿಲುವು ಹೇಳಿಕೊಂಡಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಕಾಂಗ್ರೆಸ್ನ ರಾಜ್ ಬಬ್ಬರ್ ಮತ್ತು ಬಿಜೆಪಿ ಹಿರಿಯ ಎಲ್.ಕೆ. ಅಡ್ವಾಣಿ ಸಹ ಸೇರಿದ್ದರು.
ಸಮಿತಿಗೆ ಉತ್ತರ ನೀಡಲು ನಿರ್ದೇಶಕರಿಗೆ ಡಿಸೆಂಬರ್ 14 ರವರೆಗೆ ಸಮಯವನ್ನು ನೀಡಲಾಗಿದೆ. ರಜಪೂತ ರಾಣಿ ಪದ್ಮಿನಿ ಮತ್ತು ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರೇಮವನ್ನು ವರ್ಣಿಸುವ ಒಂದು ಕನಸಿನ ದೃಶ್ಯವನ್ನು ಹೊಂದಿರುವ ವದಂತಿಗಳ ಹಿನ್ನೆಲೆಯಲ್ಲಿ  ಚಿತ್ರವು ಭಾರಿ ವಿವಾದವನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com