ಪಾಕಿಸ್ತಾನ: ಪೇಶಾವರ ಕಾಲೇಜ್ ಮೇಲೆ ಬುರ್ಖಾಧಾರಿ ಉಗ್ರರ ದಾಳಿ, ವಿದ್ಯಾರ್ಥಿಗಳು ಸೇರಿ 9 ಸಾವು

ಪಾಕಿಸ್ತಾನದ ಪೇಶಾವರದಲ್ಲಿರುವ ಸರ್ಕಾರಿ ಸಂಶೋಧನಾ ಸಂಸ್ಥೆಯ ಮೇಲೆ ಬುರ್ಖಾ ಧರಿಸಿದ ಐವರು ಉಗ್ರರ ತಂಡ ಗುಂಡಿನ....
ಕೃಷಿ ವಿಸ್ತಾರ ನಿರ್ದೇಶನಾಲಯ
ಕೃಷಿ ವಿಸ್ತಾರ ನಿರ್ದೇಶನಾಲಯ
ಪೇಶಾವರ: ಪಾಕಿಸ್ತಾನದ ಪೇಶಾವರದಲ್ಲಿರುವ ಸರ್ಕಾರಿ ಸಂಶೋಧನಾ ಸಂಸ್ಥೆಯ ಮೇಲೆ ಬುರ್ಖಾ ಧರಿಸಿದ ಐವರು ಉಗ್ರರ ತಂಡ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ.
ನಗರದ ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕೃಷಿ ವಿಸ್ತರಣೆ ನಿರ್ದೇಶನಾಲಯದ ಹಾಸ್ಟೇಲ್ ವಿದ್ಯಾರ್ಥಿಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಎಲ್ಲಾ ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಬುರ್ಖಾ ಧರಿಸಿದ್ದ ಉಗ್ರರು ಆಟೋ ರಿಕ್ಷಾವೊಂದರಲ್ಲಿ ಬಂದು ಆಟೋಮ್ಯಾಟಿಕ್ ಮಷಿನ್ ಗನ್ ಬಳಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಗುಂಡಿನ ದಾಳಿ ನಡೆಸುತ್ತಿರುವ ಮಾಹಿತಿ ಪಡೆದ ಪೊಲೀಸರ ಮತ್ತು ಸೇನಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಸಾವಿನ ಸಂಖ್ಯೆ ತಗ್ಗಿಸಲು ಸಾಧ್ಯವಾಯಿತು ಎಂದು ಖೈಬರ್ ಪಖ್ತುಂಖ್ವಾ ಪೊಲೀಸ್ ಮಹಾ ನಿರ್ದೇಶಕ ಸಲಾಹುದ್ದೀನ್ ಮೆಹ್ಸುದ್ ಅವರು ಹೇಳಿದ್ದಾರೆ.
ತೆಹ್ರೀಕ್ ಐ ತಾಲಿಬಾನ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com